Composer : Shri Prasannavenkata dasaru
Sri Satyabhinava Tirtharu
Period – 1673 – 1706
ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: |
ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ |
satyanaathaabdhisambhUta: sadgOgaNavijRumbhita: |
satyaabhinavatIrthEndu santaapaan hantu santatam |
Aradhane: Jyeshta Shuddha Chaturdashi
Vrundavana : Nachiargudi or Nachiarkoil (TN)
ಯತಿರತನತಿಮತಿಯುತನೆ
ರತಿಪತಿಪಿತ ಸೇವಾರತನೆ ಮ
ರುತಮತ ಭಕುತಿಪೂರಿತನೆ
ನಾಥ ಸತ್ಯಾಭಿನವ ತೀರಥನೆ [ಪ]
ಶ್ರುತಿ ಸ್ಮೃತಿ ಇತಿಹಾಸಾರ್ಥ ನೀ
ಜ್ಞಾತತೆಗತಿ ಸಮರ್ಥ
ಕ್ಷಿತಿಸತಿವಿತ್ತ ವಿರಹಿತನೆ ಮ
ನ್ಮಥ ಜಿತಕಾಂತಿ ಶೋಭಿತನೆ
ನೀತಿ ಚತುರತೆ ಸುವಿರತಿ ನಿಸ್ಸೀಮ ವಿ
ಖ್ಯಾತ ರಘುಪತಿ ಅರ್ಚಕ ಪಥಗಮ್ಯ
ಸತತ ವಿದ್ವತ್ ಪ್ರತತಿಗೆ ವಿತ್ತರಣ ಶೂರೋ
ನ್ಮತ್ತ ದುರ್ಮತ್ತ ಕಾಂತಾರ ಕುಠಾರ [೧]
ಧ್ಯಾನ ಮೌನ ಪೂರ್ಣ ಗಂಭೀರ ಗೀ
ರ್ವಾಣ ವಾಣಿನಿರುತ ಉಚ್ಚಾರ
ಜ್ಞಾನಿ ಜನರಿಗೆ ಘನ್ನಗುರುವೆ ನಿ
ದಾನ ಗುಣ ಕಲ್ಪತರುವೆ
ಮಾನಾಥನ ಪೂಜೆ ಮನ ಮನೆಯೊಳು ಮಾಡಿ
ನೀನನಾಯಾಸದಿ ನಲಿನಲಿದಾಡಿ
ದೀನಜನರಿಗೆ ತತ್ವಜ್ಞಾನ ಸುಧೆ
ಯನುದಿನದೊಳೆರೆದೆ ಕಾಮಧೇನುವಿನಂತಯ್ಯ [೨]
ತ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀ
ಸೀತಾಪತಿ ಅತಿಮುದ ಬಡಿಸಿ
ಮತ್ತಮಾಯಿಮೊತ್ತ ಗಜಸಿಂಗ ನಿನ್ನ
ಪ್ರತಿ ಎಂತೊ ಗುರುಕುಲೋತ್ತುಂಗ
ಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲ
ಸತ್ಯನಾಥಸುತ ಸತ್ಯಾಭಿನವ ತೀರಥನೆ
ಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತ
ನ್ಯಥಾ ಗತಿ ಕಾಣೆನೆನ್ನ ರಕ್ಷಿಸಯ್ಯ ಪಿತನೆ [೩]
yatiratanatimatiyutane
ratipatipita sEvAratane ma
rutamata BakutipUritane
nAtha satyABinava tIrathane [pa]
Sruti smRuti itihAsArtha nI
j~jAtategati samartha
kShitisativitta virahitane ma
nmatha jitakAMti SOBitane
nIti caturate suvirati nissIma vi
KyAta raGupati archaka pathagamya
satata vidvat pratatige vittaraNa SUrO
nmatta durmatta kAMtAra kuThAra [1]
dhyAna mauna pUrNa gaMBIra gI
rvANa vANiniruta uccAra
j~jAni janarige Gannaguruve ni
dAna guNa kalpataruve
mAnAthana pUje mana maneyoLu mADi
nInanAyAsadi nalinalidADi
dInajanarige tatvaj~jAna sudhe
yanudinadoLerede kAmadhEnuvinaMtayya [2]
trEtA kShitiparge migilenisi SrI
sItApati atimuda baDisi
mattamAyimotta gajasiMga ninna
prati eMto gurukulOttuMga
cittajanayya prasanveMkaTESa BajanaSIla
satyanAthasuta satyABinava tIrathane
sutta vistarisi ninna kIrti dyutimaNiyaMta
nyathA gati kANenenna rakShisayya pitane [3]
Leave a Reply