Composer : Shri Shripadarajaru
ಮೂರೊಂದು ಮೊಗದವನ ಮುದ್ದು ಮಡದಿಗೆ
ಮುದದಿ ಪ್ರಣಾಮ || ಪ ||
ಅಸ್ವಂತ್ರರೊಡೆಯ ಸ್ವತಂತ್ರ ಸ್ವಾಮೀ
ನಿನ್ನಯ ಸೊಸೆಗೆ ಶುಭದ ಪ್ರಣಾಮ || ಅ.ಪ್||
ಗಾನದಿ ಜಾಣೆ ಹಸ್ತದಿ ವೀಣೆ
ಸಕಲ ವಿದ್ಯಗೆ ಜಾಣೆ ಚತುರಾನನ ರಾಣೆ
ತೊರಿಸೆನಗೆ ಪಂಚ ಭೆದದ ಕರುಣೆ
ಪಾಲಿಸೆ ಎನ್ನನು ಪರಮ ಕಲ್ಯಾಣಿ || ೧ ||
ಪರಮ ಪವಿತ್ರೆ ಮಾಧವನ ಪ್ರೀತೆ ಮತ್ತೆ
ಅವಗೆ ಸೋತೆ ತಿಳಿಯದು ನಿನ್ನಯ ಖ್ಯಾತೆ
ಗುಣದಿ ವಿಸ್ತಾರೆ ಜಗದಿ ಪ್ರಖ್ಯಾತೆ
ತಿಳಿಸೆನಗೆ ಜಗದೊಡೆಯನ ಕೀರ್ತೆ ||೨||
ಮೂರೊಂದು ಹಸ್ತದಿಂದ ಲಿಖಿತ ದೊಡೆಯನ
ಸೇವೆ ಗಯ್ಯುತಲಿರುವೆ
ಹರ ಇಂದ್ರಾದ್ಯಖಿಲರಿಂದ ಸೇವೆ ಪಡೆಯುತಿರುವೆ
ಮುದದಿ ರಂಗ ವಿಠಲಗೆ ಸೊಸೆಯಾಗಿರುವೆ ||೩||
mooroMdu mogadavana muddu maDadige
mudadi praNaama || pa ||
aswaMtraroDeya swataMtra swAmI
ninnaya sosege shubhada praNaama || a.p||
gaanadi jaaNe hastadi veeNe
sakala vidyage jaaNe chaturAnana raaNe
torisenage paMcha bhedada karuNe
paalise ennanu parama kalyaaNi || 1 ||
parama pavitre maadhavana preete matte
avage sOte tiLiyadu ninnaya khyaate
guNadi vistaare jagadi prakhyAte
tiLisenage jagadoDeyana keerte ||2||
mooroMdu hastadiMda likhita doDeyana
sEve gayyutaliruve
hara iMdraadyakhilariMda sEve paDeyutiruve
mudadi raMga viThalage soseyaagiruve ||3||
Leave a Reply