Composer : Shri Gopaladasaru
Shri Vadeendra Tirtharu : 1728-1750
Ashrama Gurugalu – Sri Upendra Tirtharu
Ashrama Shishyaru – Sri Varadendra Tirtharu
Vrundavana @ MANTRALAYA
ವಂದಾರುಜನಸಂದೋಹಮಂದಾರತರುಸನ್ನಿಭಮ್ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್
vaMdaarujanasaMdOhamaMdaaratarusannibham |
vRuMdaarakagurupraKyaM vaMdE vaadIMdradEshikam
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದಲಿನ್ನು
ಮನಸಿಜ ಆರಂಭಿಸಿ ಮನು ಮುನಿಕುಲ
ಚಿಂತಾಮಣಿಯೆ ವಾದೇಂದ್ರ ಮರುತಮತ
ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ||ಪ||
ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗ
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ
ದಾನಾದಿ ಕರ್ಮ ಶಮ ದಮ ನಾನಾ
ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ||೧||
ಹರಿಯೇ ಸರ್ವೋತ್ತಮ ಮರುತ ದೇವನೆ ಗುರು
ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳು ಮೆರೆದೆ ವಾದಿಗಳುಕ್ತಿಧುರದಿಂದ
ತರಿದೆ ನಂಬಿದವರ ಕರುಣದಿ ಪೊರೆದೆ ||೨||
ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ
ಭೇದವ ತರಿದೆ ಮನೋಭೀಷ್ಟ ಮೋ
ದದಿಗರೆದೆ ರಾಮನಾಮ ಸ್ವಾದ ಸವಿದೆ ||೩||
ಬರಹಾ ಸರಿತೆತೀರ ಮಂತ್ರಾಲಯದಲ್ಲಿ
ಗುರುರಾಯ ಆಜ್ಞೆಯಿಂದ ವರ ಸನ್ನಿಧಿಯಲ್ಲಿ
ಸ್ಥಿರವಾಗಿ ನಿಂದೆ ಸುಮಹಿಮೆಯಲಿ
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ ||೪||
ಮರುತಾಂತರ್ಗತ ಗೋಪಾಲವಿಠಲನ್ನ
ಹರುಷದಿ ಪೂಜಿಪ ಗುರು ಉಪೇಂದ್ರ
ತೀರ್ಥರ ಕರಕಂಜಜಾತ ಭಕ್ತರಕಾಮ ವರ
ಪಾರಿಜಾತ ಕಾಮಧೇನು ಕರುಣಿಸೊ ದಾತ ||೫||
eNeyAro nimage kuMBiNiya madhyadalinnu
manasija AraMBisi manu munikula
ciMtAmaNiye vAdEMdra marutamata
vanadhicaMdra kumatagajagaNake mRugEMdra ||pa||
snAnunuShThAna kAladalli SrISaraMga
pANiya nyAsa dhyAna mADuva dhIra
dAnAdi karma Sama dama nAnA
guNArNa BajisuvaMtha dhIra prasanna ||1||
hariyE sarvOttama maruta dEvane guru
eraDumUru BEda sthiraveMdu sthApisi
dhareyoLu merede vAdigaLuktidhuradiMda
taride naMbidavara karuNadi porede ||2||
vEdArthagaLanella vyAKyAna muKadiMda
sAdhisi dharegella bOdhisi avaraGa
BEdava taride manOBIShTa mO
dadigarede rAmanAma svAda savide ||3||
barahA saritetIra maMtrAlayadalli
gururAya Aj~jeyiMda vara sannidhiyalli
sthiravAgi niMde sumahimeyali
mereve nI muMde dayadalenna poreyayya taMde ||4||
marutAMtargata gOpAlaviThalanna
haruShadi pUjipa guru upEMdra
tIrthara karakaMjajAta BaktarakAma vara
pArijAta kAmadhEnu karuNiso dAta ||5||
Leave a Reply