Composer : Shri Janardana vittala
Shri Vadeendra Tirtharu : 1728-1750
Ashrama Gurugalu – Sri Upendra Tirtharu
Ashrama Shishyaru – Sri Varadendra Tirtharu
Vrundavana @ MANTRALAYA
ವಂದಾರುಜನಸಂದೋಹಮಂದಾರತರುಸನ್ನಿಭಮ್ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್
vaMdaarujanasaMdOhamaMdaaratarusannibham |
vRuMdaarakagurupraKyaM vaMdE vaadIMdradEshikam
ವಾದೇಂದ್ರ ಗುರುರಾಯಾ |
ಮೋದ ಕೊಡು ನಿನ್ನ |ಪಾದ ಸ್ಮರಿಸುವಂತೆ |ಪ|
ಉಪೇಂದ್ರರಾಯರ ವರ ಕುಮಾರನೆ |
ತಪಸಿಗಳೊಳಗೆನ್ನ ತವಕದಿ ಪೊಂದಿಸೋ |೧|
ಕವನ ಮಾರ್ಗದ ಹವಣವ ತೋರಿಸೋ |
ಭುವನ ಪವಿತ್ರಾ ಭೂಸುರಾಗ್ರಣಿಯೇ |೨|
ಮಂತ್ರಾಲಯದಲ್ಲಿ ನಿಂತು ಮೆರೆವ | ಶ್ರೀ |
ಕಂತು ಜನಕನ ಏಕಾಂತದಿ ಭಜಿಪ |೩|
ಮಾನ ಮಮತೆಯಿಂದ ಹೀನತನವ ಪರಿ |
ಜ್ಞಾನಿಗಳೊಳಗಿಡು ಸಾನುರಾಗದಿ |೪|
ವರ ಜನಾರ್ದನವಿಠ್ಠಲ ಯನ್ನನು |
ಕರವಿಡಿವಂದದಿ ಕರುಣಿಸೈಯ್ಯ ಶ್ರೀ |೫|
vAdEMdra gururAyA |
mOda koDu ninna |pAda smarisuvaMte |pa|
upEMdrarAyara vara kumArane |
tapasigaLoLagenna tavakadi poMdisO |1|
kavana mArgada havaNava tOrisO |
Buvana pavitrA BUsurAgraNiyE |2|
maMtrAlayadalli niMtu mereva | SrI |
kaMtu janakana EkAMtadi Bajipa |3|
mAna mamateyiMda hInatanava pari |
j~jAnigaLoLagiDu sAnurAgadi |4|
vara janArdanaviThThala yannanu |
karaviDivaMdadi karuNisaiyya SrI |5|
Leave a Reply