Guruvina dharma

Composer : Shri Mohana dasaru

By Smt.Shubhalakshmi Rao

ಗುರುವಿನ ಧರ್ಮ ಕೋರಾಣ್ಯದ ಭಿಕ್ಷ
ಅರಿತು ನೀಡಲು ಮೋಕ್ಷ [ಪ]

ಮರೆತು ಬಿಟ್ಟರೆ ಕಪಾಳ ಮೋಕ್ಷ
ಯಮನಲ್ಲಾಹೋದು ಶಿಕ್ಷ [ಅ.ಪ]

ಖಂಡುಗ ಜೀವವ ಕೈಲ್ ಹಿಡಕೊಂಡು
ಮಂಡೆ ಬಾಗಿ ನಿಮ್ಮಂಗಳದೊಳಗೆ
ಅಂಡಲೆಯಲು ಮೋರೆ ಹಿಂಡಿ-ಕೊಂಡರೆ
ಯಮ ದಂಡನೆ ತಪ್ಪದೋ [೧]

ಜಂಗಮರು ಜಗತ್ ಪಾವನರು
ಲಿಂಗಾಂಗಿಗಳು ನಿಸ್ಸಂಗಿಗಳು
ಹಿಂಗದೆ ಸೀತಾಂಗನೆ ಭರ್ತನ ಪದ
ಉಂಗುಟ ತೊಳೆದು ಅಗ್ಗಣಿ ಧರಿಸಿರೋ [೨]

ಐವತ್ತಾರು ದೇಶದ ಒಳಗೆ
ಇಪ್ಪತ್ತೊಂದು ಸಾವಿರದಾರ್ನೂರು
ಕೈವಲ್ಯ ಸಾಧನ ನಮಗಿರಲು ಭಯ-
ವೆತ್ತಣದೋ ಮೋಹನ್ನ ವಿಠ್ಠಲ [೩]


guruvina dharma kOrANyada BikSha
aritu nIDalu mOkSha [pa]

maretu biTTare kapALa mOkSha
yamanallAhOdu SikSha [a.pa]

KaMDuga jIvava kail hiDakoMDu
maMDe bAgi nimmaMgaLadoLage
aMDaleyalu mOre hiMDi-koMDare
yama daMDane tappadO [1]

jaMgamaru jagat pAvanaru
liMgAMgigaLu nissaMgigaLu
hiMgade sItAMgane Bartana pada
uMguTa toLedu aggaNi dharisirO [2]

aivattAru dESada oLage
ippattoMdu sAviradArnUru
kaivalya sAdhana namagiralu Baya-
vettaNadO mOhanna viThThala [3]

Leave a Reply

Your email address will not be published. Required fields are marked *

You might also like

error: Content is protected !!