Pahi mohana vittala

Composer : Shri Vijayadasaru – Ankita pradana to Shri Mohana dasaru

By Smt.Shubhalakshmi Rao

ಪಾಹಿ ಮೋಹನ ವಿಠಲ ಪರಮಕರುಣಾ ಜಲನಿಧೆ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ [ಪ]

ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
ಜ್ಞಾನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣೆಯೆ
ಆನಂದ ನಂದನನೆ ತೃಣವ ಪಿಡಿದು ರತುನ
ವನು ಮಾಡಿ ತೋರುವ ಸ್ವಾಮಿ [೧]

ನಿನ್ನಧೀನ ಕರ್ಮ ಸ್ವಭಾವ ಮೊದಲಾಗಿ
ಅನ್ಯಥಾ ಯೆಲ್ಲಿ ಕಾಣೆ
ಮನ್ನಿಪುದು ಮುದದಿಂದ ಮಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ [೨]

ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು
ಧರೆಯೊಳಗೆ ಪರಿಪೂರ್ಣವಾಗಿರಲಿ ಸ್ವಾಮಿ [೩]


pAhi mOhana viThala paramakaruNA jalanidhe
mahadAdi dEva vaMdya |
mOhapASava biDisi naMbidavage olidu
rahasyamati koDuvudu svAmi [pa]

nInitta mAtugaLu poLLAgaballave
anaMta janumavAge
Anobbanennadiru kIrtisuva naraneMdu
j~jAnigaLigarivAgide
Enayya ninnaMGri Bajisadale irutippa
mAnavana klESakeNeye
AnaMda naMdanane tRuNava piDidu ratuna
vanu mADi tOruva svAmi [1]

ninnadhIna karma svaBAva modalAgi
anyathA yelli kANe
mannipudu mudadiMda maMdanennade enna
binnapava baridenisade
anyanivanallavo ennanne poMdida
ninna dAsana dAsanu
unnaMta guNavittu urukAla olidu pra
sannanAgO pAvannaranna [2]

nararige sAdhana satkIrtane eMdu
paramEShThi oredanidako
paripari bageyiMda karmagaLa mADidare
durita bemmogavAgavu
piridAgi bEDideno vijayaviThThala ninna
SaraNaroLagiTTu kApADu
sthiravAgi aMkitava prErisi koDisiddu
dhareyoLage paripUrNavAgirali svAmi [3]

Leave a Reply

Your email address will not be published. Required fields are marked *

You might also like

error: Content is protected !!