Composer : Shri Pranesha dasaru
ಪಾಹಿ ಪಾಹಿ ಗುರು ಮೋಹನರಾಯಾ ಪಾಹಿ ಪಾಹಿ [ಪ]
ಪಾಹಿ ಪಾಹಿ ಗುರು ಮೋಹನ ಸಿಂಧುರ
ವಾಹನಪದ ಪಂಕೇರುಹ ಭೃಂಗಾ [ಅ.ಪ]
ನವ ಭಕುತಿಗಳೆಂಬೊ ಸರಪಳಿಯೊಳು |
ನವ ನವ ರೂಪದಿ ನಲಿವ ಸುಧೀರಾ [೧]
ಪದುಮನಾಭನ ಧ್ಯಾನದಿ ಮದವೇರಿ |
ಪದೆ ಪದೆಗೆ ಹರಿ ಪದವಾಗಾವ [೨]
ವಿಜಯದಾಸರ ಪಾದರಜವ ಧರಿಸಿ ವೀ- |
ರಜ ಪ್ರಾಣೇಶ ವಿಠಲನ ಭಜಿಸಿದಿ [೩]
pAhi pAhi guru mOhanarAyA pAhi pAhi [pa]
pAhi pAhi guru mOhana siMdhura
vAhanapada paMkEruha BRuMgA [a.pa]
nava BakutigaLeMbo sarapaLiyoLu |
nava nava rUpadi naliva sudhIrA [1]
padumanABana dhyAnadi madavEri |
pade padege hari padavAgAva [2]
vijayadAsara pAdarajava dharisi vI- |
raja prANESa viThalana bhajisidi [3]
Leave a Reply