Composer : Shri Amba bai
ಪ್ರಾಣದೇವನ ನಮಿಪೆ ನಮೋ
ಪ್ರಾಣಕಧೀಶನೆ ಶರಣು ನಮೋ
ಕಾಣಿಸು ಹರಿಯಂಘ್ರಿಯನು ನಮೋ
ಪ್ರಾಣ ಪಂಚ ರೂಪಾತ್ಮ ನಮೋ [ಪ.]
ಅಂಜನೆ ಆತ್ಮಜ ಕುವರ ನಮೋ
ಸಂಜೀವನ ಗಿರಿ ತಂದೆ ನಮೋ
ನಂಜುಂಡನ ಪ್ರಿಯ ಜನಕ ನಮೋ
ಕಂಜಾಕ್ಷನ ದಾಸಾರ್ಯ ನಮೊ (೧)
ಗುಪ್ತದಿ ಕೃಷ್ಣನ ದಾಸ ನಮೊ
ಆಪ್ತವರ್ಗ ನಿರ್ಧೂತ ನಮೋ
ಶಕ್ತ ಜರಾದಿ ಹಂತ ನಮೋ
ತಪ್ತಕಾಂಚನ ಸುದೀಪ್ತ ನಮೊ (೨)
ಏಕವಿಂಶತಿ ಮತಧ್ವಂಸ ನಮೋ
ಶ್ರೀಕಳತ್ರಪ್ರಿಯ ಪಾತ್ರ ನಮೋ
ಏಕ ಚತುರ ನವಗ್ರಂಥ ನಮೋ
ಜೋಕೆಯಿಂದ ನಿರ್ಮಿಸಿದೆ ನಮೋ (೩)
ಮುಕ್ತ ಜೀವರ ಸ್ತುತ್ಯ ನಮೋ
ಯುಕ್ತಿವಂತ ಜಗದ್ವ್ಯಾಪ್ತ ನಮೋ
ಶಕ್ತಿವಂತ ಶುದ್ಧಾತ್ಮ ನಮೋ
ಭಕ್ತಭರಿತ ಹರಿಪ್ರೀತ ನಮೋ (೪)
ನಮೋ ನಮೋ ಶ್ರೀಗೋಪಾಲ
ಕೃಷ್ಣವಿಠ್ಠಲನಿಗೆ ಪ್ರಿಯಬಾಲ
ನಮೋ ನಮೋ ಶ್ರೀ ಭಾರತಿಲೋಲ
ನಮಿಸುವೆ ಚಳ್ಳಕೆರೆಯ ಪಾಲ (೫)
prANadEvana namipe namO
prANakadhISane SaraNu namO
kANisu hariyaMGriyanu namO
prANa paMca rUpAtma namO [pa.]
aMjane Atmaja kuvara namO
saMjIvana giri taMde namO
naMjuMDana priya janaka namO
kaMjAkShana dAsArya namo (1)
guptadi kRuShNana dAsa namo
Aptavarga nirdhUta namO
Sakta jarAdi haMta namO
taptakAMcana sudIpta namo (2)
EkaviMSati matadhvaMsa namO
SrIkaLatrapriya pAtra namO
Eka catura navagraMtha namO
jOkeyiMda nirmiside namO (3)
mukta jIvara stutya namO
yuktivaMta jagadvyApta namO
SaktivaMta SuddhAtma namO
BaktaBarita hariprIta namO (4)
namO namO SrIgOpAla
kRuShNaviThThalanige priyabAla
namO namO SrI BAratilOla
namisuve caLLakereya pAla (5)
Leave a Reply