Composer : Shri Pradyumna Tirtharu – Narahari ankita
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ||ಪ||
ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ||ಅ.ಪ||
ತಂದೆ ತಾಯಿಯು ನೀನೇ ಬಂಧು ಬಳಗ ನೀನೆ
ಸಂದೇಹವಿಲ್ಲವೋ ಕಂದನೆಂದೆನ್ನದಂಥ (೧)
ಒಂದೂ ತಿಳಿಯದಂಥ ಮಂದಮತಿಯು ನಾನು
ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ (೨)
ಸಂದೇಹ ಕಳೆದಿನ್ನ ಬಂಧವಾಗಿಹ ಅಘ
ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ (೩)
ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ
ಕರುಣಸಾಗರ ನಿನ್ನ ಕರುಣ ಪಡೆಯದಂಥ (೪)
ಶಾಂತ ಶ್ರೀ ನರಹರಿ ಪಂಥಾದಿಚರಿಸದೇ
ಭ್ರಾಂತನಾದೆ ಭವ ಕಾಂತರ ದಾಟಿಸದಂಥ (೫)
tappEnu mADidenO brahmaNya guru ||pa||
appA ninnaya manakoppadE ippaMtha ||a.pa||
taMde tAyiyu nInE baMdhu baLaga nIne
saMdEhavillavO kaMdaneMdennadaMtha (1)
oMdU tiLiyadaMtha maMdamatiyu nAnu
CaMdadiMdali buddhi muMde hELAdaMtha (2)
saMdEha kaLedinna baMdhavAgiha aGa
vRuMda kShamisi bEga muMde kareyadaMtha (3)
duruLarellaru sEri maruLugoLisi enna
karuNasAgara ninna karuNa paDeyadaMtha (4)
SAMta SrI narahari paMthAdicarisadE
BrAMtanAde Bava kAMtara dATisadaMtha (5)
Leave a Reply