Composer : Shri Gurugovinda dasaru
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ಶರಣು ಗುರು ಬ್ರಹ್ಮಣ್ಯ |
ಶರಣು ಶಿರಿ ಸುರಮಾನ್ಯ ಪರಿಹರಿಸು ಭವತಾಪ |
ಬಿನ್ನವಿಪೆ ಮುನಿಪ ||ಪ||
ಪುರುಷೋತ್ಮ ಕರಜಾತ | ಕಣ್ವ ತಟದಲಿ ಖ್ಯಾತ
ನರಹರಿಯ ಪದಕಮಲ | ಭಜಕ ಶೀಲ |
ಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪ
ಪರಿಹರಿಸೊ ಮುನಿಮೌಳಿ | ನಾನು ಪದಧೂಳಿ (೧)
ಯೋನಿ ಅನೇಕದಲಿ | ಬಂದಿರುವೆ ನಾ ಬಳಲಿ
ಮಾನ ನಿಧಿ ನೀಯೆನ್ನ | ಕಾಯೊ ದಯ ಪೂರ್ಣ |
ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವ
ಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ (೨)
ವಿಕಳ ಮತಿಯನು ಹರಿಸು | ಅಕಳಂಕ ನೆಂದೆನಿಸು
ಸುಖತೀರ್ಥ ಮತ ಸುಧೆಯ | ಉಣುವ ಪರಿಯ |
ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥ
ಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ (೩)
ವ್ಯಾಸರಾಯರ ಗುರುವೆ | ಕೈಗಳನು ನಾ ಮುಗಿವೆ
ಲೇಸು ಹೊಲ್ಲೆಗಳೆಂಬ | ದ್ವಂದ್ವಗಳ ಉಂಬ
ಮೀಸಲದ ಮನವಿತ್ತು | ವೈರಿಗಳನೆಗ್ಗೊತ್ತು
ಈ ಸುಕೃತ ಒಂದಿರಲಿ | ನಿನ್ನ ದಯವಿರಲಿ (೪)
ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆ
ಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ |
ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವ
ಸುಷ್ಠು ಹೃದ್ಗುಹದಲ್ಲಿ | ಕಾಣುವುದು ಅಲ್ಲಿ (೫)
SaraNu guru brahmaNya |
SaraNu Siri suramAnya pariharisu BavatApa |
binnavipe munipa ||pa||
puruShOtma karajAta | kaNva taTadali KyAta
narahariya padakamala | Bajaka SIla |
SaraNa jana surakalpa | taruve ennaya pApa
parihariso munimauLi | nAnu padadhULi (1)
yOni anEkadali | baMdiruve nA baLali
mAna nidhi nIyenna | kAyo daya pUrNa |
j~jAnArkanenisiruva | mauni tava sadBAva
pUrNa hari suj~jAna | pAlisai nipuNa (2)
vikaLa matiyanu harisu | akaLaMka neMdenisu
suKatIrtha mata sudheya | uNuva pariya |
suKadiMda karuNisuta | suKa hariya nOLpaMtha
prakaraNadalirisenna | mauni kularanna (3)
vyAsarAyara guruve | kaigaLanu nA mugive
lEsu hollegaLeMba | dvaMdvagaLa uMba
mIsalada manavittu | vairigaLaneggottu
I sukRuta oMdirali | ninna dayavirali (4)
viThThala supUjakane | kaShTagaLa kaLeyuvane
SiShTa sajjana pAla | haripada vilOla |
kRuShNa guru gOviMda | viThThalana padadvaMdva
suShThu hRudguhadalli | kANuvudu alli (5)
Leave a Reply