Composer : Shri Gurugovinda vittala dasaru
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ಬ್ರಹ್ಮಣ್ಯ ತೀರ್ಥ ಗುರು ರಾಜಾ |
ನಿನ್ನ ನಮ್ಮಿದೆನೊ ಭಾಸ್ಕರ ಸುತೇಜಾ |
ಭಾವಿಬೊಮ್ಮ ಮತವರುಹಿ ಮಹೋಜಾ |
ಸಲಹೊ ಪ್ರಮ್ಮೇಯಂಗಳ ನಿಧಿಯ ಸಹೋಜಾ [ಪ]
ಓದ್ದಾಡುತಿಹೆನೊ ಈ ಭವದೀ |
ಸುಖ ಗದ್ದುಗೆಯನೇರ್ವಂಥ ಹಾದೀ |
ತೋರಿ ಉದ್ಧರಿಸೊ ಬಲು ಕೃಪಾ ಜಲಧೀ |
ಗುರುವೆ ಶುದ್ಧ ಬುದ್ಧಿಯ ನೀಯೊ ಮುದದೀ (೧)
ಯಾತ್ರೆಗಳ ಮಾಡ್ದೆನೆಂಬ |
ಬಿಂಕದ್ ವಾರ್ತೆಯೊಂದಲ್ಲದಲೆ ಇಂಬ |
ಕಾಣೆ ಕ್ಷೇತ್ರ ಮೂರ್ತಿಯ ಕಾಂಬೆನೆಂಬ |
ಆಶೆ ಪೂರ್ತಿ ಮಾಡೆನ್ನ ಗುರು ಬಿಂಬ (೨)
ಧನವನಿತೆ ವಿಷಯದಲ್ಲೀ |
ಬಹಳ ಮನ ಮಾಡಿ ನೊಂದೆನಲ್ಲೀ |
ಹರಿಯಮನ ಮುಟ್ಟ ಭಜಿಸು ಎಂಬಲ್ಲೀ |
ಇನ್ನು ಘನ ಜ್ಞಾನ ಭಕುತಿ ಇಲ್ಲಲ್ಲೀ (೩)
ಜೀವಗೆಲ್ಲಿಯ ಸ್ವತಂತ್ರಾ |
ಹರಿಗುರು ತಾವಲ್ಲಿ ಮಾಡುತಿಹ ತಂತ್ರ |
ದಿಟವಿದು ಜೀವನೇ ಮಾಳ್ಪುನೆಂಬುದೆ ಕುತಂತ್ರ |
ತಿಳಿಸೊ ಭಾವ ಜಾನಯ್ಯನ ಸ್ವತಂತ್ರ (೪)
ನಾನು ನನ್ನದು ಎಂಬ ಮಾತ |
ಕಳೆದು ನೀನು ನೀನೇ ಎಂಬ ಮಂತ್ರ |
ಕೊಟ್ಟು ಮಾನ ಮೇಯದ ಸಾರ ವ್ರಾತ |
ತಿಳಿಸೊ ಜ್ಞಾನ ನಿಧಿ ಪುರುಷೋತ್ಮ ತಂತ್ರ (೫)
ಕಾರಕ ಕ್ರಿಯ ದ್ರವ್ಯವೆನಿಪ |
ಭ್ರಮವು ಮೂರರಿಂದಲಿ ದೂರ ಮಾಳ್ಪ |
ಮಾರ್ಗ ತೋರಿಸಲಹುವುದು ಯತಿ ಭೂಪ |
ತವಪದ ವಾರಿಜಕೆ ಈ ನೀಚ ಬೀಳ್ಪ (೬)
ತ್ರ್ಯಕ್ಷಾಂಶ ಭೂತರಾದ |
ಸನ್ಯಾಸಿ ಅಕ್ಷೋಭ್ಯ ಕರಜರಾದ |
ಅಜೇಯ ಇಕ್ಷುಚಾಪನ್ನ ಗೆಲಿದ |
ಜಯಾರ್ಯ ಭಿಕ್ಷುವಿನ ಮಾರ್ಗರಾದ (೭)
ನ್ಯಾಯ ಸುಧೆ ಕೇಳಿ ಮೋದ |
ಪಡೆವದಾಯ ತೋರಿದಿ ನಿರ್ವಿವಾದ |
ಇನ್ನು ಗಾಯನದಿ ಮಹಿಮೆ ಅಗಾಧ |
ಪೇಳ್ವ ಆಯತವ ನೀಯೋ ಸುಭೋಧ (೮)
ಬೃಹತೀ ಸಹಸ್ರ ಮಂತ್ರ |
ಜಪಿಪ ಮಹಯೋಗದಾತ ಮಹಾಂತ |
ಬೇಡ್ವೆ ಬೃಹತಿ ನಾಮಕನು ಎಂಬಂಥ |
ಹರಿಯಮಹ ಮಹಿಮೆ ಕಂಡು ಹಿಗ್ವಂಥ (೯)
ಸೃಷ್ಟ್ಯಾದಿ ಅಷ್ಟಕಗಳ |
ಗೈವ ಕೃಷ್ಣನ್ನ ಮಹಿಮೆಗಳ |
ಕೇಳಿ ಹೃಷ್ಟರಾಗುವ ಜನಗಳ |
ಸಂಗ ಕೊಟ್ಟುದ್ಧರಿಸೊ ನಮ್ಮಗಳ (೧೦)
ಭಾವ ಜಾರಿಯ ತಾತನ |
ಗುರುಗೋವಿಂದ ವಿಠ್ಠಲನ |
ಮನದಿ ಓವಿ ಕಾಂಬ ಸುಹದನಾ |
ತೋರಿ ಕಾವುದೆನ್ನನು ಕೃಪೆಯ ಸದನ (೧೧)
brahmaNya tIrtha guru rAjA |
ninna nammideno BAskara sutEjA |
BAvibomma matavaruhi mahOjA |
salaho prammEyaMgaLa nidhiya sahOjA [pa]
OddADutiheno I BavadI |
suKa gaddugeyanErvaMtha hAdI |
tOri uddhariso balu kRupA jaladhI |
guruve Suddha buddhiya nIyo mudadI (1)
yAtregaLa mADdeneMba |
biMkad vArteyoMdalladale iMba |
kANe kShEtra mUrtiya kAMbeneMba |
ASe pUrti mADenna guru biMba (2)
dhanavanite viShayadallI |
bahaLa mana mADi noMdenallI |
hariyamana muTTa Bajisu eMballI |
innu Gana j~jAna Bakuti illallI (3)
jIvagelliya svataMtrA |
hariguru tAvalli mADutiha taMtra |
diTavidu jIvanE mALpuneMbude kutaMtra |
tiLiso BAva jAnayyana svataMtra (4)
nAnu nannadu eMba mAta |
kaLedu nInu nInE eMba maMtra |
koTTu mAna mEyada sAra vrAta |
tiLiso j~jAna nidhi puruShOtma taMtra (5)
kAraka kriya dravyavenipa |
Bramavu mUrariMdali dUra mALpa |
mArga tOrisalahuvudu yati BUpa |
tavapada vArijake I nIca bILpa (6)
tryakShAMSa BUtarAda |
sanyAsi akShOBya karajarAda |
ajEya ikShucApanna gelida |
jayArya BikShuvina mArgarAda (7)
nyAya sudhe kELi mOda |
paDevadAya tOridi nirvivAda |
innu gAyanadi mahime agAdha |
pELva Ayatava nIyO suBOdha (8)
bRuhatI sahasra maMtra |
japipa mahayOgadAta mahAMta |
bEDve bRuhati nAmakanu eMbaMtha |
hariyamaha mahime kaMDu higvaMtha (9)
sRuShTyAdi aShTakagaLa |
gaiva kRuShNanna mahimegaLa |
kELi hRuShTarAguva janagaLa |
saMga koTTuddhariso nammagaLa (10)
BAva jAriya tAtana |
gurugOviMda viThThalana |
manadi Ovi kAMba suhadanA |
tOri kAvudennanu kRupeya sadana (11)
Leave a Reply