Composer : Shri Mohana dasaru
Shri Bhuvanendra Tirtha : Info.courtesy: Shri Nagaraju Haveri
Period : 1785 – 1799
Ashrama Gurugalu : Sri Varadendra Teertharu
Ashrama Shishyaru : Sri Subhodhendra Teertharu
Aradhana Tithi : Vaishaka Krishna Saptami..
Vrindavana Situated at : Rajoli
भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥
ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ ||
ಭುವನೇಂದ್ರ ಯತಿ ರನ್ನ ಭುವನ ಪಾವನ್ನ
ತವಕದಿಂ ವ್ಯಾಸರಾಯರ ಭಜಿಪ ಘನ್ನ (ಪ)
ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ
ಸಮೃದ್ಧಿ ಎಂದೆನಿಪ ಮುನಿಪ |
ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪ
ಅದ್ವೈತ ತ್ರಯ ವರ ಪ್ರವರ್ತಕನೇ [೧]
ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-
ರಂತರದಲಿ ಪೇಳಿ ಹರುಷದಿಂ |
ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತು
ಯಂತ್ರ ವಾಹಕನ ತೀರ್ಥವನೆರೆದ ಧೀರ [೨]
ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥ
ಕರಕಮಲ ಸಂಜಾತ ಭುವನ ವಿಖ್ಯಾತ |
ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನ
ಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ [೩]
BuvanEMdra yati ranna Buvana pAvanna
tavakadiM vyAsarAyara Bajipa Ganna (pa)
advaita mata kOlAhala suja-nAbdhi
samRuddhi eMdenipa munipa |
saddharma sattApasa sakala vidyAlApa
advaita traya vara pravartakanE [1]
taMtra sArAMta AdyaMtagaLa arthava ni-
raMtaradali pELi haruShadiM |
maMtrOpadESavaM mADi mudreyanittu
yaMtra vAhakana tIrthavanereda dhIra [2]
muni kulOttama SrI varadEMdra tIrtha
karakamala saMjAta Buvana viKyAta |
animitta baMdhu guru mOhanna viThalanna
kShaNa biDade dhEnisuva guruvE surataruvE [3]
Leave a Reply