Namisuvenu Bhuvanendra

Composer : Shri Jagannatha dasaru

By Smt.Shubhalakshmi Rao

Shri Bhuvanendra Tirtha : Info.courtesy: Shri Nagaraju Haveri
Period : 1785 – 1799
Ashrama Gurugalu : Sri Varadendra Teertharu
Ashrama Shishyaru : Sri Subhodhendra Teertharu
Aradhana Tithi : Vaishaka Krishna Saptami..
Vrindavana Situated at : Rajoli
भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥
ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ ||


ನಮಿಸುವೆನು ಭುವನೇಂದ್ರ ಗುರುರಾಯರ
ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ |ಪ|

ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ
ಶುದ್ಧೇತರ ಪಕ್ಷ ಸಪ್ತಮಿಯಲಿ
ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ
ಪದದ್ವಯವನೈದಿದ ಮಹಾಮಹಿಮರನ ಕಂಡು [೧]

ರಾಜವಳ್ಳಿ ಎಂಬ ಪುರದಿ ಕರುಣದಿ ಪರಿ
ವ್ರಾಜಕಾಚಾರ್ಯವರ ತನ್ನ ಪಾದ
ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ
ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ [೨]

ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ
ವಾತಾತ್ಮಜನ ಪಾದ ಮೂಲದಲ್ಲಿ
ಪ್ರೀತಿ ಪೂರ್ವಕವಾಗಿ ವಾಸವಾದರು ಜಗ
ನ್ನಾಥ ವಿಠ್ಠಲನ ಕಾರುಣ್ಯಪಾತ್ರರ ಕಂಡು [೩]


namisuvenu BuvanEMdra gururAyara
amita mahimage ahOrAtriyali biDade |pa|

siddhArdhi nAma saMvatsarada vaiSAKa
SuddhEtara pakSha saptamiyali
vidvatsaBA madhyadali rAmavyAsara
padadvayavanaidida mahAmahimarana kaMDu [1]

rAjavaLLi eMba puradi karuNadi pari
vrAjakAcAryavara tanna pAda
rAjIvayugaLa dhEnisutipparige kalpa
BUjadaMdadi bEDidiShTArtha koDuvarige [2]

SrI tuMga BadrA taraMgiNI tIradali
vAtAtmajana pAda mUladalli
prIti pUrvakavAgi vAsavAdaru jaga
nnAtha viThThalana kAruNyapAtrara kaMDu [3]

Leave a Reply

Your email address will not be published. Required fields are marked *

You might also like

error: Content is protected !!