Composer : Shri Pranesha dasaru
Shri Bhuvanendra Tirtha : [Info.courtesy: Shri Nagaraju Haveri]
Period : 1785 – 1799
Ashrama Gurugalu : Sri Varadendra Teertharu
Ashrama Shishyaru : Sri Subhodhendra Teertharu
Aradhana Tithi : Vaishaka Krishna Saptami..
Vrindavana Situated at : Rajoli
भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥
ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ ||
ಗುರುಗಳ ನೋಡಿರೈ | ಉತ್ತಮ ವರಗಳ ಬೇಡಿರೈ |ಪ|
ದುರುಳ ತಿಮಿರ ದಿನಕರ | ಶರಣರ ಸುರತರು |
ವರದೇಂದ್ರರ ಕರ ಪಂಕಜರುಹ |ಅ.ಪ|
ಮಂಗಳ ವಿಗ್ರಹ ಮಧ್ವಮತಾಂಬುದಿ ಸೋಮ |
ಸದ್ಗುಣ ಧಾಮ |
ಪಿಂಗಳನಿಭ ಸಂನ್ಯಾಸ ಕುಲೋತ್ತಮ |
ನೀತಾ ಲೋಕ ವಿಖ್ಯಾತ ||
ಸಂಗರಹಿತ ಕೌಪೀನ
ಕಮಂಡಲು ಧರ |ದೋಷ ವಿದೂರಾ |
ಮಂಗಳೆ ಪತಿ ಪದ ಭಜಕ |
ಅಘೋರಗ ವೀಂದ್ರ ಶ್ರೀ ಭುವನೇಂದ್ರಾ |೧|
ಜನ್ಮಾರಭ್ಯವು ಲೌಕಿಕ ಸ್ವಪ್ನದೊಳರಿಯಾ |
ಭೂಸುರ ವರ್ಯಾ |
ಸುಮ್ಮನೆ ಈ ಪರಿ ಪದವಿಯು ಜಗದೊಳು |
ಬಹದು ಆರಿಗೆ ಅಹುದು ||
ಬೊಮ್ಮನ ಸಂತತಿಯಿದು ಪುಸಿಯಲ್ಲವು ಸತ್ಯಾ |
ಭಜಿಸಿರಿ ನಿತ್ಯಾ | ಎಮ್ಮ ಬಳಿಯೊಳಿಹ
ದುಷ್ಟಮತೇಂಧನ |
ದಾವಾ ಸೌಖ್ಯವನೀವಾ |೨|
ಧಾರಿಣಿಯೊಳು ವಿಸ್ತರಿಸಿದ ಸ್ವಮತವ |
ಧೀರ ಗುಣ ಗಂಭೀರಾ |
ಆರಿಂದೊಶ ಚರಿತೆಯ ಪೂರ್ತಿಸಿ |
ಪೇಳ್ವುದಕೆ ಬಹುಸುಖ ಮನಕೆ ||
ಶ್ರೀ ರಾಘವೇಂದ್ರರನುಗ್ರಹ |
ಪಾರಾವಾರದೊಳಗೆ ವಿಹಾರಾ |
ಘೋರಿಸುತಿಹ ಸಂಸಾರ ಸಮುದ್ರಕೆ |
ಮುನಿಯೂ ಯತಿ ಶಿರೋಮಣಿಯೂ |೩|
ಚಿರಕಾಲದ ಸುಕೃತ ದೊರಕಲು |
ವದಗುವುದು ಸೇವೆಯಿವರದು |
ಮರಳ್ಯೊಂದ್ಯೋಚಿಸಲದೆ |
ಶರಣಾಗತರಾಗೀ ಚಿಂತೆಯ ನೀಗಿ ||
ಎರವಿಲ್ಲದೆ ದುಃಖವ ಪರಿಹರಿಪರು |
ಹತ್ತೇ ಕರೆವರು ಮತ್ತೇ |
ಸಿರಿ ಪೂರ್ಣಾಯು ಸುತಾದಿ |
ವಿಷಯಗಳ ಕೊಡುವ ದುರಿತವ ತರಿವ |೪|
ತವಕದೊಳಿವರ ಪದಾಬ್ಜವ |
ಸೇವಿಪ ಭಕ್ತ ಜೀವನ್ಮುಕ್ತಾ |
ಕುವಲಯದೊಳ-ಗೀಗಿವರಿಗೆ |
ಸರಿಯಾರಿಲ್ಲ ಕೇಳಿರಿ ಸೊಲ್ಲಾ ||
ಅವನೀಶರು ಎಂಬಾಹ್ವಯ |
ತಿಳಿಯಲಿಕುಂಟೇ ಅಧಿಕರುವುಂಟೇ |
ಇವರಿಗೆರಗದಿರೆ ಒಲಿಯನು |
ಶ್ರೀ ಪ್ರಾಣೇಶವಿಠಲನು ಲೇಶಾ |೫|
gurugaLa nODirai | uttama varagaLa bEDirai |pa|
duruLa timira dinakara | SaraNara surataru |
varadEMdrara kara paMkajaruha |a.pa|
maMgaLa vigraha madhvamatAMbudi sOma |
sadguNa dhAma |
piMgaLaniBa saMnyAsa kulOttama |
nItA lOka viKyAta ||
saMgarahita kaupIna
kamaMDalu dhara |dOSha vidUrA |
maMgaLe pati pada Bajaka |
aGOraga vIMdra SrI BuvanEMdrA |1|
janmAraByavu laukika svapnadoLariyA |
BUsura varyA |
summane I pari padaviyu jagadoLu |
bahadu Arige ahudu ||
bommana saMtatiyidu pusiyallavu satyA |
Bajisiri nityA | emma baLiyoLiha
duShTamatEMdhana |
dAvA sauKyavanIvA |2|
dhAriNiyoLu vistarisida svamatava |
dhIra guNa gaMBIrA |
AriMdoSa cariteya pUrtisi |
pELvudake bahusuKa manake ||
SrI rAGavEMdraranugraha |
pArAvAradoLage vihArA |
GOrisutiha saMsAra samudrake |
muniyU yati SirOmaNiyU |3|
cirakAlada sukRuta dorakalu |
vadaguvudu sEveyivaradu |
maraLyoMdyOcisalade |
SaraNAgatarAgI ciMteya nIgi ||
eravillade duHKava parihariparu |
hattE karevaru mattE |
siri pUrNAyu sutAdi |
viShayagaLa koDuva duritava tariva |4|
tavakadoLivara padAbjava |
sEvipa Bakta jIvanmuktA |
kuvalayadoLa-gIgivarige |
sariyArilla kELiri sollA ||
avanISaru eMbAhvaya |
tiLiyalikuMTE adhikaruvuMTE |
ivarigeragadire oliyanu |
SrI prANESaviThalanu lESA |5|
Leave a Reply