Composer : Shri Jayesha vittala
ಕಲ್ಯಾಣಿ ಪೂರ್ಣೇ ಕರುಣೀಸೂ | ವರಮಹಾಲಕ್ಷ್ಮಿ || ಪ ||
ಕಮಲಾಸದನೇ ಸುಸ್ಮಿತವದನೇ |
ಕಮಲಾನೇತ್ರೇ ಸುಂದರಗಾತ್ರೇ | ಕಲ್ಯಾಣಿ ಕರುಣೀಸೂ
ವಿಮಲಾಪಾಂಗಾದೀಕ್ಷಣದಿಂದಲಿ |
ಕಮಲಾಸನ ಭವ ಪದಗಳ ನೀಡುತ || ೧ ||
ಮಂಗಳ ಮಯಳೇ ತಿಂಗಳ ಶತನಿಭೆ |
ಪೊಂಗೊಳನೂದುವ ರಂಗನ ನಿಜಸತಿ |
ಶೃಂಗಾ ರಸಾರಳೆ ಪ್ರಸನ್ನೆ ವರಗಳ |
ಹಿಂಗದಿ ಪಾಲಿಸು ಹರುಷ ಸುಪೂರ್ಣಳೆ || ೨ ||
ರನ್ನಾ ಮಕುಟಾ ಕಿರೀಟ ಭೂಷಣ |
ಪೊನ್ನಂಬರ ಪರಿಪೂರ್ಣಳೆ ಪಾಲಿಸು |
ಘನ್ನ ಕಸ್ತೂರಿ ಕುಂಕುಮ ಫಾಲೇ |
ಪ್ರಸನ್ನಾಯುತ ಸಿರಿ ನೇತ್ರದಿ ನೋಡೆನ್ನ || ೩ ||
ಅಕ್ಷಯ ಶೋಭನ ಸುರಿವೋ ಶ್ರೀಕರ |
ಲಕ್ಷುಮಿ ಎನ್ನಯಭೀಷ್ಟವ ಪಾಲಿಸು |
ಪಕ್ಷಿಗಮನನಾ ವಕ್ಷದಿ ಮೆರೆಯುವ |
ಅಕ್ಷರಪುರುಷಳೆ ವರ ಮಹಲಕ್ಷ್ಮಿ || ೪ ||
ಕಮಲಾಮಲ್ಲಿಗೆ ಕೇತಕಿ ಜಾಜೀ |
ವಿಮಲಾಮುಕ್ತಾ ಮಣಿಮಯ ಹಾರಳೆ |
ಕಮಲೇ ನೀ ಅತಿಕೋಮಲ ಚಿತ್ತಳೆ |
ಅಮಲಾ ಜಯೇಶವಿಠ್ಠಲನ ತೋರಿಸು || ೫ ||
kalyANi pUrNE karuNIsU | varamahAlakShmi || pa ||
kamalAsadanE susmitavadanE |
kamalAnEtrE suMdaragAtrE | kalyANi karuNIsU
vimalApAMgAdIkShaNadiMdali |
kamalAsana Bava padagaLa nIDuta || 1 ||
maMgaLa mayaLE tiMgaLa SataniBe |
poMgoLanUduva raMgana nijasati |
SRuMgA rasAraLe prasanne varagaLa |
hiMgadi pAlisu haruSha supUrNaLe || 2 ||
rannA makuTA kirITa BUShaNa |
ponnaMbara paripUrNaLe pAlisu |
Ganna kastUri kuMkuma PAlE |
prasannAyuta siri nEtradi nODenna || 3 ||
akShaya SOBana surivO SrIkara |
lakShumi ennayaBIShTava pAlisu |
pakShigamananA vakShadi mereyuva |
akSharapuruShaLe vara mahalakShmi || 4 ||
kamalAmallige kEtaki jAjI |
vimalAmuktA maNimaya hAraLe |
kamalE nI atikOmala cittaLe |
amalA jayESaviThThalana tOrisu || 5 ||
Leave a Reply