Composer : Shri Purandara dasaru
ನಂಬಿದೆ ನಿನ್ನ ಪಾದ ನರಸಿಂಹ
ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ||೧||
ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೋ ನರಸಿಂಹ ||೨||
ತುಂಬುರು ನಾರದಪ್ರಿಯ ನರಸಿಂಹ
ಚೆಲ್ವ ಶಂಬರಾರಿಯ ಪಿತನೆ ನರಸಿಂಹ ||೩||
ಅಂಬರೀಷನ ಕಾಯ್ದೆ ನರಸಿಂಹ
ಜಗದಂಬಾರಮಣನೆ ಸಿರಿ ನರಸಿಂಹ ||೪||
ಬಾಲ ಕರೆದಲ್ಲಿ ಬಂದೆ ನರಸಿಂಹ
ಭಕ್ತಪಾಲಿಪ ದಯಾಳು ಸಿರಿ ನರಸಿಂಹ ||೫||
ಲೀಲೆಯಿಂದ ಹಿರಣ್ಯನ ನರಸಿಂಹ
ಕೊಂದ ಲೋಲ ಸಿರಿಯರಸನೆ ನರಸಿಂಹ ||೬||
ಅಚ್ಯುತಾನಂತ ಗೋವಿಂದ ನರಸಿಂಹ
ಸಿರಿಸಚ್ಚಿದಾನಂದ ಮುಕುಂದ ನರಸಿಂಹ ||೭||
ಕಿಚ್ಚಿನಂದದಿ ಬೆಂದೆ ನರಸಿಂಹ
ಭವ ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ ||೮||
ಕರಿಮೊರೆಯನು ಕೇಳಿ ನರಸಿಂಹ
ಬಲು ಭರದಿಂದೊದಗಿ ಬಂದೆ ನರಸಿಂಹ ||೯||
ಗರುಡವಾಹನನಾಗಿ ನರಸಿಂಹ
ಉದ್ಧರಿಸಿ ಕಾಯ್ದೆಯಲ್ಲೋ ನರಸಿಂಹ ||೧೦||
ದೇವರ ದೇವನು ನೀನೆ ನರಸಿಂಹ
ಬೇರೆ ಕಾವರನು ಕಾಣೆನಯ್ಯ ನರಸಿಂಹ ||೧೧||
ಭಾವಜನಯ್ಯನೆ ಸಿರಿ ನರಸಿಂಹ
ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ||೧೨||
ತಂದೆ ತಾಯಿ ಗುರು ದೈವ ನರಸಿಂಹ
ಎನ್ನ ಬಂಧುಬಳಗವು ನೀನೆ ನರಸಿಂಹ ||೧೩||
ಕುಂದು ಹೆಚ್ಚು ನೋಡಬೇಡ ನರಸಿಂಹ
ಪುರಂದರವಿಠ್ಠಲ ಕಾಯೋ ನರಸಿಂಹ ||೧೪||
naMbide ninna pAda narasiMha
enna beMbiDade salahayya narasiMha ||1||
haMbalisuvenu balu narasiMha
pAda naMbidavaranu kAyO narasiMha ||2||
tuMburu nAradapriya narasiMha
celva SaMbarAriya pitane narasiMha ||3||
aMbarIShana kAyde narasiMha
jagadaMbAramaNane siri narasiMha ||4||
bAla karedalli baMde narasiMha
BaktapAlipa dayALu siri narasiMha ||5||
lIleyiMda hiraNyana narasiMha
koMda lOla siriyarasane narasiMha ||6||
acyutAnaMta gOviMda narasiMha
sirisaccidAnaMda mukuMda narasiMha ||7||
kiccinaMdadi beMde narasiMha
Bava vicceyiMda biDisayya narasiMha ||8||
karimoreyanu kELi narasiMha
balu bharadiMdodagi baMde narasiMha ||9||
garuDavAhananAgi narasiMha
uddharisi kAydeyallO narasiMha ||10||
dEvara dEvanu nIne narasiMha
bEre kAvaranu kANenayya narasiMha ||11||
BAvajanayyane siri narasiMha
ninna sEveya pAlisi kAyO narasiMha ||12||
taMde tAyi guru daiva narasiMha
enna baMdhubaLagavu nIne narasiMha ||13||
kuMdu heccu nODabEDa narasiMha
puraMdaraviThThala kAyO narasiMha ||14||
Leave a Reply