Composer : Shri Varadesha Vittala
ಜೈ ಜೈ ರಾಮ ಹರೇ , ಜೈ ಜೈ ಕೃಷ್ಣ ಹರೇ
ರಾಮ ಹರೇ ಹರೇ ರಾಮ ಹರೇ ಕೃಷ್ಣ
ಹರೇ ಹರೇ ಕೃಷ್ಣ ಹರೇ ||ಪ||
ಕೌಸಲ್ಯಜ ವರ ವಂಶೋದ್ಭವ ಸುರ
ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ ಯದು
ವಂಶೋದ್ಭವ ಶ್ರೀ ಕೃಷ್ಣಹರೇ (೧)
ಮುನಿಮಖ ರಕ್ಷಕ ದನುಜರ ಶಿಕ್ಷಕ
ಫಣಿಧರ ಸನ್ನುತ ರಾಮಹರೇ
ಘನವರ್ಣಾಂಗ ಸುಮನಸರೊಡೆಯ ಶ್ರೀ –
ವನಜಾಸನ ಪಿತ ಕೃಷ್ಣ ಹರೇ (೨)
ತಾಟಕೆ ಖರಮಧು ಕೈಟಭಾರಿ ಪಾ
ಪಾಟವಿ ಸುರಮಖ ರಾಮಹರೇ
ಆಟದಿ ಫಣಿಮೇಲೆ ನಾಟ್ಯವನಾಡಿದ
ಖೇಟವಾಹನ ಶ್ರೀ ಕೃಷ್ಣ ಹರೇ (೩)
ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಮಹಿಮ ಶ್ರೀ ರಾಮ ಹರೇ
ಬಲುವಕ್ರಾಗಿದ್ದ ಅಬಲೆಯ ಕ್ಷಣದಲಿ
ಚೆಲುವೆಯ ಮಾಡಿದ ಕೃಷ್ಣ ಹರೇ (೪)
ಹರಧನು ಭಂಗಿಸಿ ಹರುಷದಿ ಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಕರುಣಾಕರ ಶ್ರೀ ಕೃಷ್ಣ ಹರೇ (೫)
ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ –
ವನು ಪಾಲಿಪ ಶ್ರೀ ಕೃಷ್ಣ ಹರೇ (೬)
ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಶ್ರೀ ಕೃಷ್ಣ ಹರೇ (೭)
ಸೇವಿತ ಹನುಮ ಸುಗ್ರೀವನ ಸಖ ಜಗ –
ತ್ಪಾವನ ಪರತರ ರಾಮಹರೇ
ದೇವಕಿ ವಸುದೇವರ ಸೆರೆ ಬಿಡಿಸಿದ
ದೇವ ದೇವ ಶ್ರೀ ಕೃಷ್ಣ ಹರೇ (೮)
ಧರೆಯೊಳಜ್ಞ ಜನರನು ಮೋಹಿಪುದಕೆ
ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದಾ
ಚರಿತೆ ಅಗಾಧವು ಕೃಷ್ಣ ಹರೇ (೯)
ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋ –
ಪರನು ಕಾಯ್ದ ಶ್ರೀ ಕೃಷ್ಣ ಹರೇ (೧೦)
ಖಂಡಿಸಿ ದಶಶಿರ ಚಂಡಾಡಿದ ಕೋ –
ದಂಡಪಾಣಿ ಶ್ರೀ ರಾಮ ಹರೇ
ಪಾಂಡು ತನಯರಿಂ ಚಂಡ ಕೌರವರ
ದಿಂಡು ಗೆಡಹಿದ ಶ್ರೀ ಕೃಷ್ಣ ಹರೇ (೧೧)
ತವಕದಿ ಅಯೋಧ್ಯಾ ಪುರಕೈದಿದ ತನ್ –
ಯುವತಿಯೊಡನೆ ಶ್ರೀ ರಾಮ ಹರೇ
ರವಿಸುತ ತನಯಗೆ ಪಟ್ಟವಗಟ್ಟಿದ
ಭವತಾರಕ ಶ್ರೀ ಕೃಷ್ಣ ಹರೇ (೧೨)
ಭರತನು ಪ್ರಾರ್ಥಿಸಲರಸತ್ವವ ಸ್ವೀ –
ಕರಿಸಿದ ತ್ವರದಲಿ ಶ್ರೀ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮ ಕೃಪಾಕರ ಕೃಷ್ಣ ಹರೇ (೧೩)
ಅತುಳ ಮಹಿಮ ಸದ್ಯತಿಗಳ ಹೃದಯದಿ
ಸತತ ವಿರಾಜಿಪ ರಾಮಹರೇ
ಸಿತವಾಹನ ಸಾರಥಿಯೆನಿಸಿದ
ಸುರತತಿ ಪೂಜಿತ ಪದ ಕೃಷ್ಣ ಹರೇ (೧೪)
ರಾಮ ರಾಮ ಯೆಂದು ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ –
ದೇಶ ವಿಠ್ಠಲ ಶ್ರೀ ಕೃಷ್ಣ ಹರೇ (೧೫)
jai jai rAma harE , jai jai kRuShNa harE
rAma harE harE rAma harE kRuShNa
harE harE kRuShNa harE ||pa||
kausalyaja vara vaMSOdBava sura
saMsEvita pada rAma harE
kaMsAdyasurara dhvaMsagaida yadu
vaMSOdBava SrI kRuShNaharE (1)
munimaKa rakShaka danujara SikShaka
phaNidhara sannuta rAmaharE
GanavarNAMga sumanasaroDeya SrI –
vanajAsana pita kRuShNa harE (2)
tATake Karamadhu kaiTaBAri pA
pATavi suramaKa rAmaharE
ATadi phaNimEle nATyavanADida
KETavAhana SrI kRuShNa harE (3)
Sileya pAdarajadali strI mADida
sulalita mahima shrI rAma harE
baluvakrAgidda abaleya kShaNadali
celuveya mADida kRuShNa harE (4)
haradhanu BaMgisi haruShadi jAnaki
karavapiDida SrIrAma harE
siri rukmiNiyanu tvaradali varisida
karuNAkara shrI kRuShNa harE (5)
janaka pELe lakShmaNa sItA saha
vanake teraLida rAma harE
vanake pOgi tannaNugaroDane gO –
vanu pAlipa SrI kRuShNa harE (6)
cadure Sabariyitta badariya phalavanu
mudadi sEvisida rAma harE
vidurana kShIrake vadagi pOda SrI
padumanABa SrI kRuShNa harE (7)
sEvita hanuma sugrIvana saKa jaga –
tpAvana paratara rAmaharE
dEvaki vasudEvara sere biDisida
dEva dEva SrI kRuShNa harE (8)
dhareyoLaj~ja janaranu mOhipudake
harana pUjisida rAma harE
harana prArthisi varavanu paDedA
carite agAdhavu kRuShNa harE (9)
girigaLiMda varaSaradhi baMdhisida
parama samartha SrIrAma harE
giriyanu tanna kiri beraLaletti gO –
paranu kAyda SrI kRuShNa harE (10)
KaMDisi daSaSira caMDADida kO –
daMDapANi SrI rAma harE
pAMDu tanayariM caMDa kauravara
diMDu geDahida SrI kRuShNa harE (11)
tavakadi ayOdhyA purakaidida tan –
yuvatiyoDane SrI rAma harE
ravisuta tanayage paTTavagaTTida
BavatAraka SrI kRuShNa harE (12)
Baratanu prArthisalarasatvava svI –
karisida tvaradali SrI rAma harE
varadharmAdyara dhariyoLu meresida
parama kRupAkara kRuShNa harE (13)
atuLa mahima sadyatigaLa hRudayadi
satata virAjipa rAmaharE
sitavAhana sArathiyenisida
suratati pUjita pada kRuShNa harE (14)
rAma rAma yeMdu nEmadi Bajipara
kAmita phalada SrI rAmaharE
prEmadi Baktara pAlipa SrI vara –
dESa viThThala SrI kRuShNa harE (15)
Leave a Reply