Composer : Shri Gurugovinda dasaru
ಅಪಮೃತ್ಯು ಪರಿಹರಿಸೊ ನಾರಸಿಂಹ
ಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ [ಪ]
ಅನ್ಯರಿಗೆ ಮೊರೆ ಇಡೆನೊ | ನಿನ್-ಹೊರತು ಇನ್ನಿಲ್ಲ
ಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇ
ಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯ
ಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ [೧]
ಜ್ವರ ಹರಾಹ್ವಯನೆಂದು | ವರ ವೇದ ಮಾನಿಗಳು
ಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನ
ಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆ
ಪರಿಪೊಷಿಸೋ ಇವನ | ಕರುಣರಸ ಪೂರ್ಣ [೨]
ತಂದೆ ತಾಯಿಯು ನೀನೇ | ಬಂಧು ಬಳಗವು ನೀನೇ
ಇಂದು ಅಂದಿಗು ನೀನೇ | ಎಂದೆಂದು ನೀನೇ |
ಕಂದನನು ಸಲಹೆಂದು | ಸಿಂದು ಶಯನನೆ
ಬೇಡ್ವೆ ಇಂದಿರಾಪತಿ ಗುರು | ಗೋವಿಂದ ವಿಠಲಾ [೩]
apamRutyu parihariso nArasiMha
kRupaNa vatsala hariye binnavipe ninagE [pa]
anyarige more iDeno | nin-horatu innilla
manyu sUktOditane | enna SiShyanigE
banna baDisuva rOga | vannu mOcipudayya
annaMta mahima hari | ninna kRupe tOrO [1]
jvara harAhvayaneMdu | vara vEda mAnigaLu
paripariyaliM ninna | stOtra gaivudana
aritu ninnali nAnu | moreya iDuveno hariye
paripoShisO ivana | karuNarasa pUrNa [2]
taMde tAyiyu nInE | baMdhu baLagavu nInE
iMdu aMdigu nInE | eMdeMdu nInE |
kaMdananu salaheMdu | siMdu Sayanane
bEDve iMdirApati guru | gOviMda viThalA [3]

Leave a Reply
You must be logged in to post a comment.