Composer : Shri Kanakadasaru
ಬ್ಯಾಡವೇಷವ ತಾಳಿ
ಒಡಿಸುತ ತುರಗವನು
ಪ್ರೌಢೆ ಪದ್ಮಾವತಿಯ
ನೋಡಿ ನಸುನಗುತ ||
ಜೋಡಾಗು ತನಗೆಂದು
ಗಾಡಿಗಾರನ ಮಾತು
ಆಡಿ ಕ್ರೋಢಾಲಯಕೆ
ಓಡಿ ಪೋದವಗೆ ಜಯ ಜಯ //೧//
ತಾಯಿ ಬಕುಳೆಯ ಕಳುಹಿ ಕಾಯದಿಂದ
ಆಕಾಶ ರಾಯನರಮನೆ
ಜೀಯೆಂದು ಪೋಗಿಸಲುಪಾಯಗಲ ನಡೆಸಿ
ತನ್ನಾಲಯವ ಕೈಕೊಂಡ ಕಮನೀಯ
ಮೂರುತಿಗೆ ಜಯ ಜಯ //೨//
ಶುಕಮುನಿಯ ಮುಖದಿಂದ
ಶುಭವಾರ್ತೆಯ ಕೇಳಿ
ಅಕಳಂಕ ಲಗ್ನದಲಿ ಇನಿತು ಪೋಗಿ
ಉರಗಗಿರಿಯಲ್ಲಿ ನೆಲೆಯಾಗಿ ನೆಲೆಸಿದ
ನೆಲೆಯಾದಿ ಕೇಶವಗೆ ಜಯ ಜಯ //೩//
byADavEShava tALi
oDisuta turagavanu
prauDhe padmAvatiya
nODi nasunaguta ||
jODAgu tanageMdu
gADigArana mAtu
aaDi krODhAlayake
ODi pOdavage jaya jaya //1//
tAyi bakuLeya kaLuhi kAyadiMda
AkAsha rAyanaramane
jIyeMdu pOgisalupAyagala naDesi
tannAlayava kaikoMDa kamaneeya
moorutige jaya jaya //2//
shukamuniya mukhadiMda
shubhavArteya kELi
akaLaMka lagnadali initu pOgi
uragagiriyalli neleyAgi nelesida
neleyAdi kEshavage jaya jaya //3//
Leave a Reply