Composer : Shri Prasannavenkata dasaru
ಶ್ರೀ ವಿಷ್ಣು ಸ್ಮರಣೆ
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗ
ಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗ
ಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘ
ಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ||
ಶೀತಲವಾಯ್ತು ಹಾಲಾಹಲ ಹರಗೆ
ಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆ
ಪಾತಕಿ ಅಜಾಮಿಳನ ಪಾಪವು ಕರಗೆ
ಪೂತರಾಗ್ವರು ಸುಜನರು ಒಳಹೊರಗೆ (೧)
ಸಿರಿ ಅರ್ಥ ಮಾಡಲಚ್ಚರವಾದ ಸ್ಮರಣೆ
ಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆ
ವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆ
ಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ (೨)
ತ್ಯಾಗ ಭೋಗ ಯೋಗ ಛಿದ್ರ ಮುಚ್ಚುವುದು
ಭೂಗಗನಸ್ಥರ ಪುಣ್ಯ ಹೆಚ್ಚುವುದು
ಕೂಗ್ಯಾಡಿ ಕುಣಿವರಾನಂದ ಫಲವಿದು
ಶ್ರೀ ಗಂಗಾಜನಕನ ತಂದು ತೋರುವುದು (೩)
ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅ
ಸಂಪ್ರಜ್ಞಾತಸ್ಥರಿಗೆ ಹರಿಗೋಲು
ಸುಪ್ರಾಪ್ತ ಮುಕ್ತರುಂಬಮೃತ ಕಣಗಳು
ಶ್ರೀ ಪ್ರಾಣನಾಥನ ನಾಮಾವಳಿಗಳು (೪)
ಸ್ವಾದನ್ನದೊಟ್ಟಿಲು ಹರಿ ನಾಮ ಸ್ಮರಣೆ
ಮಧ್ವ ಶಾಸ್ತ್ರಜ್ಞರ ವಚನಾಗ್ನಿಗೆ ಅರಣಿ
ಅದ್ವೈತ ಮತ ಧ್ವಾಂತಕ್ಕುದಿತ ಸತ್ತರಣಿ ಶ್ರೀ
ಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ (೫)
SrI viShNu smaraNe
SrI viShNu smaraNeyiM sAdhu saMsarga
SrI viShNu smaraNeyeMbude apavarga
SrI viShNu smaraNeli sadbuddhi dIrGa
SrI viShNu smaraNegeccara budhavarga ||pa||
SItalavAytu hAlAhala harage
mAte draupadi lajje kAyitu maruge
pAtaki ajAmiLana pApavu karage
pUtarAgvaru sujanaru oLahorage (1)
siri artha mADalaccaravAda smaraNe
parasOdvApariyeMbuva guhyasmaraNe
viriMcige tRuptiyAgada nAmasmaraNe
uragESana jihvege nilukada smaraNe (2)
tyAga BOga yOga Cidra muccuvudu
BUgaganasthara puNya heccuvudu
kUgyADi kuNivarAnaMda Palavidu
SrI gaMgAjanakana taMdu tOruvudu (3)
BUpradakShiNe tIrthayAtrege migilu a
saMpraj~jAtastharige harigOlu
suprApta muktaruMbamRuta kaNagaLu
SrI prANanAthana nAmAvaLigaLu (4)
svAdannadoTTilu hari nAma smaraNe
madhva SAstraj~jara vacanAgnige araNi
advaita mata dhvAMtakkudita sattaraNi SrI
madviShNu prasanveMkaTana smaraNe (5)
Leave a Reply