Composer : Shri Gonavarada Rama dasaru
Shri Rama ankita Bade Sahebaru – Shri Rama dasaru
1882 – Jolada Hedagi of Devadurga Taluk, Raichur District.
ನಾ ಮಾಡಿದಪರಾಧ ನನ್ನನ್ನು ಕಾಡಲು
ನೀ ಮಾಡುವದೇನೋ ಜಾನಕೀನಾಥ [ಪ]
ಕಾಮಕ್ರೋಧಗಳಳಿದು ತಾಮಸಂಗಳು ನೀಗಿ
ನೇಮನಿತ್ಯದಿ ಹರಿನಾಮ ಭಜಿಸಲಿಲ್ಲ [೧]
ಪರನಿಂದೆ ಪರನಾರಿಯರ ಮೋಹ ತೊರೆಯದೆ
ಗುರುಹಿರಿಯರ ಜರಿದು ನರಕಕ್ಕೆ ಗುರಿಯಾದೆ [೨]
ತಂದೆ ಶ್ರೀರಾಮನೆ ಕಂದನ ತಪ್ಪು ದಯ
ದಿಂದ ಕ್ಷಮಿಸಿ ಇನ್ನು ಚೆಂದದಿಂ ಸಲಹಯ್ಯ [೩]
nA mADidaparAdha nannannu kADalu
nI mADuvadEnO jAnakInAtha [pa]
kAmakrOdhagaLaLidu tAmasaMgaLu nIgi
nEmanityadi harinAma Bajisalilla [1]
paraniMde paranAriyara mOha toreyade
guruhiriyara jaridu narakakke guriyAde [2]
taMde SrIrAmane kaMdana tappu daya
diMda kShamisi innu ceMdadiM salahayya [3]
Leave a Reply