Composer : Shri Mahipati dasaru
ಶ್ರೀರಾಮ ರಾಮ [ಪ]
ಜಯ ಜಯಾತ್ಮಾರಾಮ
ದಯ ಗುಣದಿ ನಿಸ್ಸೀಮ
ಮಾಯಾ ರಹಿತನುಪಮ ಕಾಯೊ
ಕೃಪಾನಿಧಿ ನಮ್ಮ [೧]
ಮುನಿಜನರ ಪ್ರತಿಪಾಲ
ದೀನಬಂಧು ದಯಾಳ
ಘನ ಸುಖದ ಕಲ್ಲೋಳ
ನೀನಹುದೈ ಅಚಲ [೨]
ಕರುಣಾಬ್ಧಿ ನೀನೆ ರಾಮ
ಹರಹೃದಯ ವಿಶ್ರಾಮ
ತರಳ ಮಹಿಪತಿ ನಿಮ್ಮ
ಸ್ಮರಿಸುವ ಪಾದಪದ್ಮ [೩]
SrIrAma rAma [pa]
jaya jayAtmArAma
daya guNadi nissIma
mAyA rahitanupama kAyo
kRupAnidhi namma [1]
munijanara pratipAla
dInabaMdhu dayALa
Gana suKada kallOLa
nInahudai acala [2]
karuNAbdhi nIne rAma
harahRudaya viSrAma
taraLa mahipati nimma
smarisuva pAdapadma [3]
Leave a Reply