Composer : Shri Shyamasundara dasaru
ದಯದಿ ಸಲಹೋ | ಜಯರಾಯ ||ಪ||
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ ||೧||
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ ||೨||
ಭೀಮ ಭವಾಟಲಿ | ಧೂಮಧ್ವಜ ಸಂ
ತ್ರಾಮಜ ಸಖ ಸಿರಿ | ಶಾಮಸುಂದರಪ್ರಿಯ ||೩||
dayadi salahO | jayarAya ||pa||
kAgiNi nilaya | kavijanagEya
yOgivariya kRupAsAgara satata ||1||
maruta suSAstrake | viracisi TIkeya
muridu kuBAShyava | mereda mahAtma ||2||
BIma BavATali | dhUmadhvaja saM
trAmaja sakha siri | SAmasuMdarapriya ||3||
Leave a Reply