Composer : Shri Vijayaramachandra vittala dasaru [Ankita pradana haadu]
ಕರುಣಿಸು ಜಯೇಶ ವಿಠ್ಠಲ | ವರ ಅಂಕಿತವನು ಇತ್ತೆ |ಪ|
ತರಳ ನಿನ್ನವನೆಂದು | ಗುರುವಾತ ಸ್ತಿಥನಾಗಿ |
ಭರದಿ ಪಾಲಿಸಿದೆ ಇವನ | ಹರಿ ನೀ ನಿದ್ದೆಡೆಗೆ ಕರೆಸಿ |ಅ.ಪ|
ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ,
ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು,
ಸ್ಮರಿಸದಂತೆ ಮಾಡು ಪರಸತಿಯರೊಲಿಮೆ,
ಮರೆಯದಂತಿರಲಿ ಪರತತ್ವವನ್ನು |೧|
ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿ
ಕೃತ ಕೃತ್ಯನಾಗಿ ಮಾಡಿಸಿ,
ಪತಿತರಾ ಸಹವಾಸ ಹಿತವೆಂದರುಪದೇ,
ಸದ್ಗತಿ ನೀವ ಮಾರ್ಗವ ತಿಳಿಸಿ |೨|
ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ,
ಗುರುಹಿರಿಯರಲ್ಲಿ ಭಕ್ತಿ, ದುರ್ವಿಷಯದಲಿ ವಿರಕ್ತಿನಿತ್ತು,
ವರ ವಿಜಯ ರಾಮಚಂದ್ರ ವಿಠಲ
ಸುರರೊಡೆಯ ಒರೆದ ನಾಮಾಮೃತವ ನುಡಿಸೀ |೩|
karuNisu jayEsha viThThala | vara aMkitavanu itte |pa|
taraLa ninnavaneMdu | guruvAta stithanAgi |
bharadi pAliside ivana | hari nI niddeDege karesi |a.pa|
irisu varNAshrama varadharma karmagaLalli,
maresi kAmya karmagaLellavannu,
smarisadaMte mADu parasatiyarolime,
mareyadaMtirali paratatvavannu |1|
atithi abhyAgatara pUje sati suta parivAradi
kRuta kRutyanAgi mADisi,
patitarA sahavAsa hitaveMdarupadE,
sadgati nIva mArgava tiLisi |2|
niruta tatva nishchayadalli j~jAna,
guruhiriyaralli bhakti, durviShayadali viraktinittu,
vara vijaya rAmachaMdra viThala
suraroDeya oreda nAmAmRutava nuDisI |3|
Leave a Reply