Composer : Shri Lakumeesha ankita
Shri Sushameendra Tirtharu: 1985-2009
Aradhana Tithi : Chaitra Bahula Dvitiya
Vrindavana : Mantralayam
ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಂ |
ಸುಶಮೀಂದ್ರಗುರುಂ ವಂದೇ ಸುಜಯೀಂದ್ರಕರೋದ್ಭವಂ |
सुधीजनसुमंदारं सुधींद्रसुतसुप्रियं ।
सुशमींद्रगुरुं वंदे सुजयींद्रकरोद्भवं ।
ಗುರು ಶ್ರೀ ಸುಶಮೀಂದ್ರರ ಚರಣ ಕಮಲ ಭಜಿಪ |
ನರನೆ ಧರೆಯೊಳು ಧನ್ಯನೋ || ಪ||
ಸುಜಯೀಂದ್ರರ ಕರ ಸರಸೀಜ ಜಾತ |
ಧರೆಯಲ್ಲಿ ಮೆರೆಯುವ ಪರಮ ಸಾತ್ವಿಕರಾದ || ಅ. ಪ ||
ರಾಜಾ ರಾಜಗೋಪಾಲಾಚಾರ್ಯ
ಪದ್ಮಾಂಬೆಯಾರ ಜಾತ |
ತೇಜ ಗುಣದಿ ರಾಜಿತಾ |
ಮೋಜಿಲಿ ಶ್ರೀ ಸುಯಮೀಂದ್ರರ ಸೇವಿಸಿ ||
ನೈಜ ಗುಣದಿ ಶ್ರೀ ಸುಜಯೀಂದ್ರರೊಲಿಸಿ |
ರಾಜಿಲಿಂದ ಸಂನ್ಯಾಸ ವಹಿಸಿ |
ಈ ಜಗದಲಿ ಮೆರೆದ ಸನ್ಮುನಿ ||೧ ||
ಇಷ್ಟ ಪ್ರದರಾದಂಥ ಶ್ರೇಷ್ಠ ಶ್ರೀ ರಾಘವೇಂದ್ರರ |
ಅಷ್ಟಾಕ್ಷರ ಮಂತ್ರ ಜಪಿಸಿ |
ನಿಷ್ಠೆಯಲಿ ಮೂಲರಾಮನಂಘ್ರಿಯ ||
ಪಟ್ಟು ಸಂತತ ಸತತ ಪೂಜಿಸಿ |
ಕಷ್ಟ ಸುಜನಕೆ ಬಿಡದೆ ಓಡಿಸಿ |
ಶಿಷ್ಟ ಕವಿಗಳ ಸಂತತ ರಕ್ಷಿಪ ||೨ ||
ದಾನದಲಿ ಕರ್ಣರೆನಿಸಿ ಜ್ಞಾನಿ ಸುರಧೇನೆನಿಸಿ |
ಮೌನೀ ಜನರಲಿ ರಾಜಿಸೀ |
ಜಾನಕೀಶ ಲಕುಮೀಶನಂಘ್ರಿಯ ||
ಧ್ಯಾನದಿಂದ ಅನೇಕ ಸ್ಥಳದಲೀ |
ಮಾನಿತರಾಗಿ ತುಲಾಭಾರಗೊಂಡು |
ತಾಣ ಮಂತ್ರಾಲಯದಿ ನೆಲೆಸಿಹ ||೩ ||
guru SrI suSamIMdrara caraNa kamala Bajipa |
narane dhareyoLu dhanyanO || pa||
sujayIMdrara kara sarasIja jAta |
dhareyalli mereyuva parama sAtvikarAda || a. pa ||
rAjA rAjagOpAlAcArya padmAMbeyAra jAta |
tEja guNadi rAjitA |
mOjili SrI suyamIMdrara sEvisi ||
naija guNadi SrI sujayIMdrarolisi |
rAjiliMda saMnyAsa vahisi |
I jagadali mereda sanmuni ||1 ||
iShTa pradarAdaMtha SrEShTha
SrI rAGavEMdrara |
aShTAkShara maMtra japisi |
niShTheyali mUlarAmanaMGriya ||
paTTu saMtata satata pUjisi |
kaShTa sujanake biDade ODisi |
SiShTa kavigaLa saMtata rakShipa ||2 ||
dAnadali karNarenisi j~jAni suradhEnenisi |
maunI janarali rAjisI |
jAnakISa lakumISanaMGriya ||
dhyAnadiMda anEka sthaLadalI |
mAnitarAgi tulABAragoMDu |
tANa maMtrAlayadi nelesiha ||3 ||
Leave a Reply