Satyapriya gururaya

Composer : Shri Vijayadasaru

By Smt.Shubhalakshmi Rao

Sri Satyapriya Tirtharu – 1737 – 1744
ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |
ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |
श्रीसत्यविजयांबोधेर्जातं सत्यप्रियामृतम् ।
जरामृती जंघनीतु विबुधानां मुदे सदा ।
Aradhana – Chaitra Shudda Trayodashi
Vrundavana – Manamadurai,TN


ಸತ್ಯಪ್ರಿಯ ಗುರುರಾಯ ಮಂಗಳಕಾಯ
ನಿತ್ಯದಲಿ ನಿಜ ಭೃತ್ಯ ಸಹಾಯ [ಪ]

ಮಧ್ವಮತಾಬ್ಧಿ ಚಂದ್ರ ಸುಗುಣಸಾಂದ್ರ
ಅದ್ವೈತಮಹಾದ್ರಿ ಇಂದ್ರ,
ಈ ಧರೆಯೊಳಗನಿರುದ್ಧನೆ ಪರನೆಂದೆದ್ದು
ನೆಗಹಿ ಕರಬದ್ಧ ಕಂಕಣರಾಗಿ
ಸಿದ್ಧ ಪ್ರಮೇಯಗಳನುದ್ಧರಿಸಿದ
ಪರಿಶುದ್ಧ ಸ್ಮರ ಮಾರ್ಗಣ ಗೆದ್ದ [೧]

ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ
ಸತತ ವೇದಾರ್ಥ ವಿಚಾರ
ಮಿತಿ ಇಲ್ಲದೇ ಅಚ್ಯುತನ ಕಥಾಮೃತ
ತತ್ವ ಮಾರ್ಗದಲಿ ವಿಹಿತ ನಿಷ್ಠರಿಗೆ ನಗುತ ಪೇಳಿದ
ಅದ್ಭುತ ಮಹಿಮಾ ಸುಚರಿತ ಆನಂದ ಭರಿತ [೨]

ನೆನೆಸಿದವರ ಸುರಧೇನು ನಿಮಗೆಲ್ಲಿ ನಾನು
ಎಣೆಗಾಣೆ ಎಣಿಸಲು ಮೇಣೂ
ಮುನಿ ಸತ್ಯಭೋಧರ ಮನದಲ್ಲಿ
ನಿಂದರ್ಚನೆಯನು ಘನವಾಗಿ ಕೈಕೊಂಬ
ಗುಣನಿಧಿ ವಿಜಯವಿಠ್ಠಲನ
ಚರಣಾಂಬುಜ ಧ್ಯಾನ ಮಾಡುವ ತ್ರಾಣ [೩]


satyapriya gururAya maMgaLakAya
nityadali nija BRutya sahAya [pa]

madhvamatAbdhi caMdra suguNasAMdra
advaitamahAdri iMdra,
I dhareyoLaganiruddhane
paraneMdeddu negahi kara
baddha kaMkaNarAgi
siddha pramEyagaLanuddharisida
pariSuddha smara mArgaNa gedda [1]

vitaraNadali balu SUrA kIrtivihArA
satata vEdArtha vicAra
miti illadE achyutana kathAmRuta
tatva mArgadali vihita niShTharige
naguta pELida adButa mahimA
sucarita AnaMda Barita [2]

nenesidavara suradhEnu nimagelli nAnu
eNegANe eNisalu mENU
muni satyaBOdhara manadalli
niMdarcaneyanu
GanavAgi kaikoMba
guNanidhi vijayaviThThalana
caraNAMbuja dhyAna mADuva trANa [3]

Leave a Reply

Your email address will not be published. Required fields are marked *

You might also like

error: Content is protected !!