Composer : Shri Tande muddumohana vittala
Shri Tande Muddu Mohana dasaru : 1865-1940
place: Karigiri (Devarayanadurga)
Aradhane : Chaitra Shudda Navami
GurugaLu: Shri Muddu Mohana Vittala Dasaru
ನಿಜವಿರಬೇಕು ಸಜ್ಜನರಿಗೆ ಒಂದು ||ಪ||
ಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ||ಅ.ಪ||
ಉದಯಾಸ್ತಮಾನ ಮಾಡುವ ವ್ಯಾಪಾರವು
ಪದುಮಾಕ್ಷ ಕೃಷ್ಣನ ಸೇವೆಯೆಂದು
ಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿ
ಮಧುವೈರಿ ಚರಿತೆಯ ಮುದದಿ ಕೇಳುವಂಥ [೧]
ಮಡದಿ ಮಕ್ಕಳು ತನ್ನ ಒಡ ಹುಟ್ಟಿದವರೆಲ್ಲ
ಒಡೆಯನ ಅಡಿಗೆ ಸೇವಕರು ಎಂದು
ದೃಢದಿ ತಿಳಿದು ಮೃಡನೊಡೆಯನ ಪಾದವ
ಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ [೨]
ಮಾತಾ ಪಿತರು ಸುತ ಭ್ರಾತರಿಷ್ಟಾ ಬಂಧು
ವ್ರಾತ ರೆಲ್ಲರು ಹರಿಗೆ ದೂತರೆಂದು
ಮಾತುಳಾಂತಕ ತಂದೆಮುದ್ದುಮೋಹನವಿಠಲ
ಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ [೩]
nijavirabEku sajjanarige oMdu ||pa||
ajajanakAne I trijagake oDeyaneMdu ||a.pa||
udayAstamAna mADuva vyApAravu
padumAkSha kRuShNana sEveyeMdu
sudatiyoDane kUDi madhura mAtugaLADi
madhuvairi cariteya mudadi kELuvaMtha [1]
maDadi makkaLu tanna oDa huTTidavarella
oDeyana aDige sEvakaru eMdu
dRuDhadi tiLidu mRuDanoDeyana pAdava
biDade BajisuvaMtha dRuDha buddhi eMbuva [2]
mAtA pitaru suta BrAtariShTA baMdhu
vrAta rellaru harige dUtareMdu
mAtuLAMtaka taMdemuddumOhanaviThala
KyAtAneMdu prIti poMduvudakke [3]
Leave a Reply