Tatva suvvali – Rudra devara stuti

Composer : Shri Jagannatha dasaru

By Smt.Shubhalakshmi Rao

ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
ಶ್ರೀ ಮಹದೇವರ ಸ್ತುತಿ

ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ-
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮ
ರೇಂದ್ರ ನಿನ್ನಡಿಗೆ ಶರಣೆಂಬೆ || ೧ ||

ನಂದಿವಾಹನ ವಿಮಲ ಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ
ಎನ್ನ ಮನ-ಮಂದಿರದಿ ನೆಲೆಸಿ ಸುಖವೀಯೊ || ೨ ||

ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ –
ನ್ನುತ್ತ ನೋಡಯ್ಯ ಶುಭಕಾಯ | ಶುಭಕಾಯ
ಭಕ್ತರಪ-ಮೃತ್ಯು ಪರಿಹರಿಸಿ ಸಲಹಯ್ಯ || ೩ ||

ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ | ಶಿವರೂಪಿ
ನೀ ಎನ್ನವರ ಪಾಲಿಸೊ ನಿತ್ಯ ಪರಮಾಪ್ತ || ೪ ||

ತ್ರಿಪುರಾರಿ ನಿತ್ಯ ಎನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ
ಕೃಪಣ ವತ್ಸಲನೆ ಕೃಪೆಯಿಂದ || ೫ ||

ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿಪ್ರಾರಬ್ಧ | ಪ್ರಾರಬ್ಧ ದಾಟಿಸು ವಿ –
ರಿಂಚಿ ಸಂಭವನೆ ಕೃತಯೋಗ || ೬ ||

ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ
ಏನು ಗತಿ ಎನಗೆ ಅನುದಿನ | ಅನುದಿನದಿ ನಿನ್ನ –
ಧೀನದವನಯ್ಯ ಪ್ರಮಥೇಶ || ೭ ||

ಅಷ್ಟಮೂರ್ತ್ಯಾತ್ಮಕನೆ ವೃಷ್ಣಿವರ್ಯನ
ಹೃದಯ-ಧಿಷ್ಠಾನದಲ್ಲಿ ಇರದೋರು | ಇರದೋರು ನೀ
ದಯಾ ದೃಷ್ಟಿಯಲಿ ನೋಡೊ ಮಹದೇವ || ೮ ||

ಮೃಡದೇವ ಎನ್ನ ಕೈ ಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನ್ನ ಮನ-
ದೃಢವಾಗಿ ಇರಲಿ ಹರಿಯಲ್ಲಿ || ೯ ||

ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ –
ರಿಗ್ರಹಿಸಿ ಎನ್ನ ಸಂತೈಸು | ಸಂತೈಸು ಇಂದ್ರಿಯವ
ನಿಗ್ರಹಿಪ ಶಕ್ತಿ ಕರುಣೀಸೋ ||೧೦ ||

ಭಾಗೀರಥೀಧರನೆ ಭಾಗವತ ಜನರ ಹೃ –
ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ –
ನ್ನಾಗಿ ಕೊಡು ಎನಗೆ ಮರೆಯದೆ || ೧೧ ||

ವ್ಯೋಮಕೇಶನೆ ತ್ರಿಗುಣನಾಮ ದೇವೋತ್ತಮ ಉ –
ಮಾಮನೋಹರನೆ ವಿರುಪಾಕ್ಷ | ವಿರುಪಾಕ್ಷ ಮಮ
ಗುರು ಸ್ವಾಮಿ ಎನಗೆ ದಯವಾಗೊ || ೧೨ ||

ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಖೇಚರೇಶನ ವಹನ ಗುಣರೂಪ | ಗುಣರೂಪ
ಕ್ರಿಯೆಗಳಾ-ಲೋಚನೆಯ ಕೊಟ್ಟು ಸಲಹಯ್ಯ || ೧೩ ||

ಮಾತಂಗ ಷಣ್ಮುಖರ ತಾತ ಸಂತತ ಜಗ –
ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು
ತಿಳಿಸು ಸಂಪ್ರೀತಿಯಿಂದ-ಲೆಮಗೆ ಅಮರೇಶ || ೧೪ ||

ಭೂತನಾಥನ ಗುಣ ಪ್ರಭಾತ ಕಾಲದಲೆದ್ದು
ಪ್ರೀತಿ ಪೂರ್ವಕದಿ ಪಠಿಸುವ | ಪಠಿಸುವವರ ಜಗ –
ನ್ನಾಥವಿಟ್ಠಲನು ಸಲಹುವ || ೧೫ ||


caMdraSEKara sumanasEMdra pUjita caraNA-
hIMdra padayOgya vairAgya | vairAgya pAlisama
rEMdra ninnaDige SaraNeMbe || 1 ||

naMdivAhana vimala maMdAkinIdharane
vRuMdArakEMdra guNasAMdra | guNasAMdra
enna mana-maMdiradi nelesi suKavIyo || 2 ||

kRuttivAsane ninna BRutyAnuBRutya e –
nnutta nODayya SuBakAya | SuBakAya
Baktarapa-mRutyu pariharisi salahayya || 3 ||

nIlakaMdhara ruMDamAli mRugavarapANi
SailajAramaNa SivarUpi | SivarUpi
nI ennavara pAliso nitya paramApta || 4 ||

tripurAri nitya ennaparAdhagaLa nODi
kupitanAgadale salahayya | salahayya binnaipe
kRupaNa vatsalane kRupeyiMda || 5 ||

paMcAsya manmanada caMcalava pariharisi
saMcitAgAmiprArabdha | prArabdha dATisu vi –
riMci saMBavane kRutayOga || 6 ||

mAnuShAnnavanuMDu j~jAna SUnyanu Ade
Enu gati enage anudina | anudinadi ninna –
dhInadavanayya pramathESa || 7 ||

aShTamUrtyAtmakane vRuShNivaryana
hRudaya-dhiShThAnadalli iradOru | iradOru nI
dayA dRuShTiyali nODo mahadEva || 8 ||

mRuDadEva enna kai piDiyo ninnavaneMdu
baDava ninnaDige binnaipe | binnaipenna mana-
dRuDhavAgi irali hariyalli || 9 ||

ugratapa nA ninnanugrahadi janiside pa –
rigrahisi enna saMtaisu | saMtaisu iMdriyava
nigrahipa Sakti karuNIsO ||10 ||

BAgIrathIdharane BAgavata janara hRu –
drOga pariharisi ninnalli | ninnalli Bakti ce –
nnAgi koDu enage mareyade || 11 ||

vyOmakESane triguNanAma dEvOttama u –
mAmanOharane virupAkSha | virupAkSha mama
guru svAmi enage dayavAgo || 12 ||

lOcanatraya ninna yAcisuve saMtatavu
KEcarESana vahana guNarUpa | guNarUpa
kriyegaLA-lOcaneya koTTu salahayya || 13 ||

mAtaMga ShaNmuKara tAta saMtata jaga –
nnAtha viThThalana mahimeya | mahimeyanu
tiLisu saMprItiyiMda-lemage amarESa || 14 ||

BUtanAthana guNa praBAta kAladaleddu
prIti pUrvakadi paThisuva | paThisuvavara jaga –
nnAthaviTThalanu salahuva || 15 ||

Leave a Reply

You might also like

error: Content is protected !!