Composer : Shri Purandara dasaru
ಬಾರಮ್ಮ ಪಾರ್ವತಿ ನಮ್ಮ ಮನೇಗೆ ಈಗ
ಬಾರಿ ಬಾರಿಗೆರಗುವೆನಮ್ಮ ||
ಬಾರಮ್ಮ ಇಲ್ಲಿಗೆ ತವರು ಮನೇ ಎಂದು,
ಕೋರಿದ ವರವ ನೀಡಿ ನೀ ನಲಿದಾಡೆ ||ಅ.ಪ.||
ಪರಿಮಳ ಗಂಧ ಕುಸುಮಗಳಿಂದ ಪೂಜಿಪೆನೆ
ಪರಮ ದಯಾಕರಿ ನೀ ಬಾರೆ
ವರಗಣಪನ ಜನನಿ ಚಿನ್ನದ ಮನವಿತ್ತು
ಹರಿಗೆ ನೀಡ ಬೇಕಮ್ಮ ಎನ್ನಮ್ಮ ||೧||
ಶಂಕರನರ್ಧಾಂಗಿ ಪಂಕಜ ಮುಖಿ ನಿನ್ನ
ರಂಗನ ನಿರ್ಮಾಲ್ಯದಿಂದ ಪೂಜಿಪೆನೆ
ತಿಂಗಳು ಒಂದು ನೀ ಪತಿ ಸಹ ಇರಬೇಕು
ಅಂಗನೆ ವರ ಗೌರಿ ಪಾರ್ವತಿ ದೇವಿ ||೨||
ಬಡವರೊಡೆಯನ ನಂದಿ ವಾಹನವೇರಿ
ತಡ ಮಾಡದೆ ಬಾರೆ ಮುಡಿ ಹೂವ ನೀಡೆ
ಮೃಡ ಸಖ ಎಂತೆಂಬೆ ಪುರಂದರ ವಿಠಲನ
ಅಡಿಯ ಸೇವೆಯ ನೀಡಿ ನೀ ದಯ ಮಾಡೆ ||೩||
bAramma pArvati namma manEge eega
bAri bArigeraguvenamma ||
bAramma illige tavaru manE eMdu,
kOrida varava nIDi nI nalidADe ||a.pa.||
parimaLa gaMdha kusumagaLiMda pUjipene
parama dayAkari nee bAre
varagaNapana janani chinnada manavittu
harige nIDa bEkamma ennamma ||1||
shaMkaranardhAMgi paMkaja mukhi ninna
raMgana nirmAlyadiMda pUjipene
tiMgaLu oMdu nee pati saha irabEku
aMgane vara gauri pArvati dEvi ||2||
baDavaroDeyana naMdi vAhanavEri
taDa mADade bAre muDi hUva nIDe
mRuDa sakha eMteMbe puraMdara viThalana
aDiya sEveya nIDi nee daya mADe ||3||
Leave a Reply