Composer : Shri Shyamasundara dasaru
ರಜತಾದ್ರಿ ನಿಲಯನ ರಜನೀಶ ಧರನ |
ತೋರೇ ಪಾರ್ವತಿಯೆ || ಪ ||
ಪಂಚಾನನ ಶಂಕರನ ಶ್ರೀಹರಿ |
ಮಂಚ ಪದವಿ ಪಡೆದವನ |
ಪಂಚ ಬಾಣ ಮದಹರನಾ,
ಗುರು ವಿರಿಂಚಿ ಕುವರ ದೂರ್ವಾಸ ಶುಕನ || ೧ ||
ನಂದಿ ಸುಶ್ಯಂದನ ಶಿವನಾ |
ಗರಳ ಕಂಧರ ತ್ರಿಪುರಾಂತಕನಾ |
ಮಂದಾಕಿನಿಧರ ಭುವನ
ಸುರ ವೃಂದವಿನುತ ನಗಚಾಪ ಧರನಾ || ೨ ||
ಸಾಮಜ ಚರ್ಮಾಂಬರನಾ,
ಶುಭ ಕಾಮಿತ ಫಲದಾಯಕನಾ |
ವಾಮದೇವ ಮುನಿ ಸುತನಾ,
ಶ್ರೀವರ ಶ್ಯಮಸುಂದರನ ಪ್ರೇಮದ ಸಖನಾ || ೩ ||
rajatAdri nilayana rajaneesha dharana |
tOrE pArvatiye || pa ||
paMcAnana shaMkarana shreehari |
maMca padavi paDedavana |
paMca bANa madaharanA,
guru viriMci kuvara dUrvAsa shukana || 1 ||
naMdi sushyaMdana shivanA |
garaLa kaMdhara tripurAMtakanA |
maMdAkinidhara bhuvana
sura vRuMdavinuta nagacApa dharanA || 2 ||
sAmaja carmAMbaranA,
shubha kAmita phaladAyakanA |
vAmadEva muni sutanA,
shreevara shyamasuMdarana prEmada sakhanA || 3 ||
Leave a Reply