Composer : Shri Vishwendra tirtharu
ಸೋದಾ ಕ್ಷೇತ್ರವೆ ದಿವ್ಯ ಕ್ಷೇತ್ರ
ಬಂದ ಜನರಿಗಿಷ್ಟವನೀವ ಕ್ಷೇತ್ರ
ವಾದಿರಾಜರು ವಾದದಿಂದ ವಾದಿಸಿ
ವೀರಶೈವರ ಗೆದ್ದ ಕ್ಷೇತ್ರ [ಪ]
ಒಂದು ಭಾಗದಿ ರೂಪ್ಯಪೀಠ ಮ-
ತ್ತೊಂದು ಭಾಗದಿ ಸೋದಾಕ್ಷೇತ್ರ
ಕುಂದು ಎಳ್ಳಷ್ಟಿಲ್ಲದೆ ತೋರ್ಪು
ದೆಂದು ಹರಿಭಕ್ತರಾದರಿಸುವರು [೧]
ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ
ವೈಕುಂಠನಂತಾಸನಗಳು
ಒಂದಾಗಿ ಶೋಭಿಸುತಿರುವ
ಚೆಂದವೇನೆಂದು ಪೇಳಲಿ ಮನವೆ [೨]
ರಾಜೇಶ ಹಯಮುಖ ಚರಣ
ಕಂಜ ಮಧುಪನಂತಿರುವ ಶ್ರೀಭಾವಿ-
ಕಂಜಜಾತನ ಪದಕರುಹ
ವಾದಿರಾಜರಾಯರ ದಿವ್ಯ ಕ್ಷೇತ್ರ [೩]
sOdA kShEtrave divya kShEtra
baMda janarigiShTavanIva kShEtra
vAdirAjaru vAdadiMda vAdisi
vIraSaivara gedda kShEtra [pa]
oMdu BAgadi rUpyapITha ma-
ttoMdu BAgadi sOdAkShEtra
kuMdu eLLaShTillade tOrpu
deMdu hariBaktarAdarisuvaru [1]
oMdE sthAnadi SvEtadvIpa matte
vaikuMThanaMtAsanagaLu
oMdAgi SOBisutiruva
ceMdavEneMdu pELali manave [2]
rAjESa hayamuKa caraNa
kaMja madhupanaMtiruva SrIBAvi-
kaMjajAtana padakaruha
vAdirAjarAyara divya kShEtra [3]
Leave a Reply