Composer : Shri Gurugovinda dasaru
ವಾದಿರಾಜ ಗುರು ಸಾರ್ವಭೌಮ
ದುರ್ವಾದಿ ವಿಭಂಜನ ನಮೊ ನಮೋ [ಪ]
ಮೋದ ತೀರ್ಥ ಸುಮತಾಂಬುಧಿ ಶಸಿ
ಮಾಧವ ಪದಪಂಕಜ ಮಧುಪ ನಮೋ [ಅ.ಪ]
ಸ್ವಾದಿವಾಸ ಮುನಿ | ಮೋದ ತೀರ್ಥ ಪದ-ವಾ
ರಾಧಕ ತೇ ನಮೊ ನಮೋ ||
ಮೇದಿನಿ ಸುರರಿಗೆ | ಮೋದ ಪ್ರದಾಯಕ
ಽನಾದಿ ಬಂಧನ ಛೇದ ನಮೋ |
ಶ್ರೀದನ ಗುಣವಾಪಾದಿಸಿ ತನ್ನೊಳು
ಮೋದಿಪ ಮಾಯ್ಗಜ ಸಿಂಹನಮೋ ||
ಬೋಧಿಸಿ ದಶಮತಿ | ಬೋಧ ಶಾಸ್ತ್ರ ದು
ರ್ವಾದಿಗಳ್ ಜೈಸಿದ ಯತಿಯೆ ನಮೋ |೧|
ವಾಗೀಶರ ಕರಜಾತ ನಮೋ ನಮೊ
ಯೋಗಿ ಕುಲಾಬ್ಧಿಗೆ ಚಂದ್ರ ನಮೋ ||
ಭಾಗವತರ ಸಂಪ್ರೇಮ ನಮೋ ನಮೊ
ಆಗಮಜ್ಞತೇ ನಮೋ ನಮೋ ||
ಭೋಗಿ ಪುರೀಶ ಸುಮೋದ ನಮೋ ನಮೊ
ಕಾಗಿನಿ ತೀರಗ ಭಜಕ ನಮೋ ||
ಭಾಗೀರಥಿ ಪಿತ ಹಯಮುಖನನು
ರಾಗದಿ ಭಜಿಸುವ ಯೋಗಿ ನಮೋ |೨|
ಭೂಸುರ ಋಣ ಕ್ಲೇಶಾಪಹ ನಮೊ ನಮೊ
ಮೂಷಕ ಬಹು ಭಯ ನಾಶ ನಮೋ ||
ಕಾಶಿ ಬದರಿ ರಾಮೇಶ್ವರ ಕ್ಷೇತ್ರ ಪ್ರ
ವಾಸಿಸಿ ಸತ್ಕಥೆ ಕರ್ತೃ ನಮೋ ||
ಲೇಶ ಮಣ್ಣು ತಾ ಕೊಡುತಲಿ ವಿಪ್ರಗೆ
ದೋಷವ ಕಳೆದಗೆ ನಮೋ ನಮೋ ||
ಮೀಸಲ ಮನದಿ ನಿಷೇವಿಸೆ ಸಂಸ್ಕೃತಿ
ಶೋಷಿಪ ಶ್ರೀ ಲಾತವ್ಯ ನಮೋ |೩|
ಎರ್ಡು ಭುಜದಿ ಹಯವದನನ ಚರಣವ
ಬಿಡದೆ ಧರಿಸುವಗೆ ನಮೊ ನಮೋ ||
ಮೃಡನುತ ನಾ ಹರಿಘ್ಹ್-ರಿವಾಣದಿ
ಕಡಲೆ ಪೂರ್ಣ ಬಿಡದೀವಗೆ ನಮೋ ||
ನಡುಮನೆ ದ್ವಿಜಸುತ ನಿಲಿಸ್ಯರ್ಚಿಸಿದಾ
ಉಡುಪಿನ ಕೃಷ್ಣಾರ್ಚಕಗೆ ನಮೊ ||
ಸಡಗರದಲಿ ಪರ್ಯಾಯಗಳನು ಮಾ
ರ್ಪಡಿಸಿರುವಾತಗೆ ನಮೋ ನಮೋ |೪|
ಪರಿ ಪರಿ ಗ್ರಂಥವು ಟೀಕಂಗಳ ತಾ
ವಿರಚಿಸಿದಾತಗೆ ನಮೋ ನಮೋ ||
ಸುರಸವು ರುಕ್ಮಿಣಿ ಪತಿ ವಿಜಯವ ತಾ
ಬರೆದು ಪೂಣೆಯಲಿ ಮೆರೆದಗೆ ನಮೋ ||
ಎರಡೆರಡೊಂದು ವೃಂದಾವನ ಸ್ವಾದಿಲಿ
ಸುರನದಿ ತಟ ನಿಲಿಸಿದವಗೆ ನಮೋ ||
ಎರಡೊಂದು ವಿಕ್ರಮ-ನುತ್ಸವ ಗೈಸಿದ
ಗುರು ಗೋವಿಂದ ವಿಠಲಾರ್ಚಕಗೆ ನಮೋ |೫|
vAdirAja guru sArvaBauma
durvAdi viBaMjana namo namO [pa]
mOda tIrtha sumatAMbudhi Sasi
mAdhava padapaMkaja madhupa namO [a.pa]
svAdivAsa muni | mOda tIrtha pada-vA
rAdhaka tE namo namO ||
mEdini surarige | mOda pradAyaka
&nAdi baMdhana CEda namO |
SrIdana guNavApAdisi tannoLu
mOdipa mAygaja siMhanamO ||
bOdhisi daSamati | bOdha SAstra du
rvAdigaL jaisida yatiye namO |1|
vAgISara karajAta namO namo
yOgi kulAbdhige caMdra namO ||
BAgavatara saMprEma namO namo
Agamaj~jatE namO namO ||
BOgi purISa sumOda namO namo
kAgini tIraga Bajaka namO ||
BAgIrathi pita hayamuKananu
rAgadi Bajisuva yOgi namO |2|
BUsura RuNa klESApaha namo namo
mUShaka bahu Baya nASa namO ||
kASi badari rAmESvara kShEtra pra
vAsisi satkathe kartRu namO ||
lESa maNNu tA koDutali viprage
dOShava kaLedage namO namO ||
mIsala manadi niShEvise saMskRuti
SOShipa SrI lAtavya namO |3|
erDu Bujadi hayavadanana caraNava
biDade dharisuvage namo namO ||
mRuDanuta nA hariGh-rivANadi
kaDale pUrNa biDadIvage namO ||
naDumane dvijasuta nilisyarcisidA
uDupina kRuShNArcakage namo ||
saDagaradali paryAyagaLanu mA
rpaDisiruvAtage namO namO |4|
pari pari graMthavu TIkaMgaLa tA
viracisidAtage namO namO ||
surasavu rukmiNi pati vijayava tA
baredu pUNeyali meredage namO ||
eraDeraDoMdu vRuMdAvana svAdili
suranadi taTa nilisidavage namO ||
eraDoMdu vikrama-nutsava gaisida
guru gOviMda viThalArcakage namO |5|
Leave a Reply