Composer : Shri Vadirajaru
ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ ||ಪ||
ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.||
ಜಲಜನಾಭನ ನಾಮವು ಈ ಜಗಕ್ಕೆಲ್ಲ
ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧||
ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ
ಹರಿ ನೀನೆ ಗತಿಯೆನಲು
ಪರಮ ಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರಳೆಗಭಯವಿತ್ತ
ಹರಿ ನಮ್ಮೊಡೆಯನಲ್ಲವೇ ಹೇ ಜಿಹ್ವೆ ||೨||
ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ
ನಾಮವೆ ಗತಿಯೆನಲು
ವಾಮನ ನೀನೆಂದು ವಂದಿಸಿದವರಿಗೆ
ಶ್ರೀಮದನಂತ ಸ್ವಾಮಿ ಹಯವದನನು
ಕಾಮಿತ ಫಲವೀವನು ಹೇ ಜಿಹ್ವೆ||೩||
mAtu mAtige kEshava nArAyaNa
mAdhava enabArade – hE jihve ||pa||
prAtaHkAladaleddu pArthasArathiyeMdu
prItili nenedare prItanAguva hari ||a.pa.||
jalajanABana nAmavu I jagakkella
janana maraNa haravu
sulaBaveMdenalAgi sukhake kAraNavidu
ballida pApagaLannella pariharisuvudeMdu
tiLidu tiLiyadiharE – hE jihve ||1||
taraLe draupadi sIreya seLeyutire
hari nIne gatiyenalu
parama puruSha BavaBaMjana kESava
duruLara mardisi taraLegabhayavitta
hari nammoDeyanallavE – hE jihve ||2||
hEma kashyapa saMBava I jagakkella
nAmave gatiyenalu
vAmana nIneMdu vaMdisidavarige
shrImadanaMta svAmi hayavadananu
kAmita phalavIvanu – hE jihve||3||
Leave a Reply