Composer : Shri Vadirajaru
ಆಂಜನೇಯನೇ ಅಮರವಂದಿತ ಕಂಜನಾಭನ ದೂತನೇ ||ಪ||
ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ ||ಅ.ಪ||
ಆಂಜನೇಯನೇ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆ
ಸಂಜೀವನವ ತಂದು ಕಪಿಗಳ ನಂಜು ಕಳೆದ ವಿಖ್ಯಾತನೇ ||೧||
ಕಾಮ ನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ |
ರಾಮ ಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ ||೨||
ಸಿಂಧು ಹಾರಿದೆ ಶೀಘ್ರದಿಂದಲೆ ಬಂದು ಸೀತೆಗೆ ನಮಿಸಿದೆ |
ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ ||೩||
ಜನಕ ತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆ |
ದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ||೪||
ರಾಮಕಾರ್ಯವ ವಹಿಸಿ ಅಕ್ಷ ಕುಮಾರನನು ಸಂಹರಿಸಿದೆ |
ಘೋರ ರಕ್ಕಸರೆಂಬುವರನು ಮಾರಿ ವಶವನು ಗೈಸಿದೇ ||೫||
ಭರದಿ ಬಂದು ರಾಮ ಪಾದಕ್ಕೆರಗಿ ಬಿನ್ನಹ ಮಾಡಿದೆ |
ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ ||೬||
AMjanEyanE amaravaMdita kaMjanAbhana dUtanE ||pa||
maMjinOlagadaMte sharadhiya dATida mahA dheerane ||a.pa||
AMjanEyanE ninna guNagaLa pogaLalaLave prakhyAtane
saMjIvanava taMdu kapigaLa naMju kaLeda vikhyAtanE ||1||
kAma nigrahanenisi surarabhimAni dEvate eniside |
rAma pAdakkeragi naDedu nissIma nIneMdeniside ||2||
siMdhu hAride shIghradiMdale baMdu sItege namiside |
taMdu mudreyanittu mAteya manava saMtOSha paDiside ||3||
janaka tanujeya manava haruShisi vanava kittIDADide |
danujarannu sadedu laMkeya analagAhuti mADide ||4||
rAmakAryava vahisi akSha kumArananu saMhariside |
ghOra rakkasareMbuvaranu mAri vashavanu gaisidE ||5||
bharadi baMdu rAma pAdakkeragi binnaha mADide |
uragagiri hayavadanana parama bhaktaneMdeniside ||6||
Leave a Reply