Hodi nagari mele

Composer : Shri Pranapati vittala on Shri Vadirajaru

ಹೊಡಿ ನಗಾರಿ ಮೇಲೆ ಕೈಯ್ಯ ಕಡ ಕಡ
ಹೊಡಿ ನಗಾರಿ ಮೇಲೆ ಕೈಯ್ಯ ||ಪ||
ಕಡು ವಾದಿರಾಜರು ದೃಢ ರುಜುಗುಣರೆಂದ್ ಹೊಡಿ ||ಅ.ಪ.||

ಹಯಮುಖ ಪಾದದ್ವಯ ಸೇವಕ ವರ
ಜಯಶೀಲರು ನಿಜ ಭಯ ಹಾರರೆಂದ್ ಹೊಡಿ ನಾಗಾರಿ ||೧||

ದೂಷಕರನು ಬಹು ಘಾಸಿ ಕೊಟ್ಟೂ ನಿಜ
ದಾಸರ ತೋಷಿಶಿ ಗೋಷಿಪರಿವರೆಂದ್ ಹೊಡಿ ನಗಾರಿ ||೨||

ಮೋದತೀರ್ಥ ಮತ ಸಾಧಿಸಿ ಮೆರೆಸುವ
ವಾದಿರಾಜ ಗುರು ಬೋಧರು ಸಮ್ರರೆಂದ್ ಹೊಡಿ ||೩||

ಇಂದಿರಾಪತಿಯ ಛಂದದಿ ಪೂಜಿಪ
ನಂದಿವಾಹನ ಮುಖ ವಂದ್ಯರಿವರೆಂದ್ ಹೊಡಿ ||೪||

ಕಲಿ ಮುಖ ದಾನವ ಬಲವ ಜಯಿಪ ನಿಷ್-
ಕಲುಷ ಚಿತ್ತ ಯತಿಕುಲ ಭೂಷಣಿವರೆಂದ್ ಹೊಡಿ ||೫||

ಕಂಸಾದಿ ಮುಖ ಧ್ವಂಸಿ ಸಮೀ ಕರಣ
ಹಂಸವಾಹ ಪ್ರಶಾಂತ ಸಹಿತರೆಂದ್ ಹೊಡಿ ||೬||

ಸುಂದರ ಪಂಚ ಸುವೃಂದಾವನದೊಳು
ವೃಂದಾರಕ ಮುನಿ ವೃಂದ ವಂದ್ಯರೆಂದ್ ಹೊಡಿ ||೭||

ಲಾತವ್ಯಾತ್ಮಕ ಭೀತಿರಹಿತ ಮಹ-
ಪಾತಕಹರ ಸುರನಾಥ ಮಹಿಮರೆಂದ್ ಹೊಡಿ ||೮||

ಭಾವಿ ಭಾರತಿದೇವಿ ಕರಕಮಲ
ಸೇವಿತಪದ ರಾಜೀವ ದ್ವಯರೆಂದ್ ಹೊಡಿ ||೯||

ವೃಂದಾವನ ಸದಮಂದಾಖ್ಯನವ ಭೂ-
ವೃಂದಾರಕರಿಗೆ ತಿಳಿಪರಿವರೆಂದ್ ಹೋಡಿ ||೧೦||

ಸಾನುರಾಗದಿ ಪ್ರಾಣಪತಿ ವಿಠಲನ
ಧ್ಯಾನದಿಂದ ಸನ್ಮಾನಿತರಿವರೆಂದ್ ಹೊಡಿ ||೧೧||


hoDi nagAri mEle kaiyya kaDa kaDa
hoDi nagAri mEle kaiyya ||pa||
kaDu vAdirAjaru dRuDha rujuguNareMd hoDi ||a.pa.||

hayamukha pAdadvaya sEvaka vara
jayasheelaru nija bhaya hArareMd hoDi nAgAri ||1||

dooShakaranu bahu ghAsi koTTU nija
dAsara tOShishi gOShiparivareMd hoDi nagAri ||2||

mOdatIrtha mata sAdhisi meresuva
vAdirAja guru bOdharu samrareMd hoDi ||3||

iMdirApatiya ChaMdadi pUjipa
naMdivAhana mukha vaMdyarivareMd hoDi ||4||

kali mukha dAnava balava jayipa niSh-
kaluSha chitta yatikula bhUShaNivareMd hoDi ||5||

kaMsAdi mukha dhvaMsi samI karaNa
haMsavAha prashAMta sahitareMd hoDi ||6||

suMdara paMca suvRuMdAvanadoLu
vRuMdAraka muni vRuMda vaMdyareMd hoDi ||7||

lAtavyAtmaka bhItirahita maha-
pAtakahara suranAtha mahimareMd hoDi ||8||

bhAvi bhAratidEvi karakamala
sEvitapada rAjIva dvayareMd hoDi ||9||

vRuMdAvana sadamaMdAkhyanava bhU-
vRuMdArakarige tiLiparivareMd hODi ||10||

sAnurAgadi prANapati viThalana
dhyAnadiMda sanmAnitarivareMd hoDi ||11||

Leave a Reply

Your email address will not be published. Required fields are marked *

You might also like

error: Content is protected !!