Aratiyanettidare – Keshava pancharatna

Composer : Shri Vadirajaru

By Smt.Lakshmi

ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||
ಶಾಶ್ವತವೀವ ಮಾಧವ
ವಾಸವವಂದ್ಯ ಗೋವಿಂದಗೆ ||ಅ.ಪ||

ದ್ವಾಪರ ರಹಿತ ಶ್ರೀವಿಷ್ಣುವಿಗೆ
ಅಪಾರ ಮಧುಸೂದನಗೆ
ಪಾಪರಹಿತ ತ್ರಿವಿಕ್ರಮಗೆ
ಆರತಿಯನೆತ್ತಿದರೆ |೧|

ಸಾಧುಸೇವಿತ ವಾಮನಗೆ
ಶ್ರೀಧರ ಹೃಷೀಕೇಶನಿಗೆ
ಆದಿಮೂರುತಿ ಪದ್ಮನಾಭಗೆ
ಆರತಿಯನೆತ್ತಿದರೆ |೨|

ದಾಮ-ಉದರದಾಲುಳ್ಳವಗೆ
ಪ್ರೇಮದಿ ಸಂಕರುಷಣಗೆ
ಕಾಮಿತಾರ್ಥವನೀವ ವಾಸುದೇವಗೆ
ಆರತಿಯನೆತ್ತಿದರೆ |೩|

ಘನಮಹಿಮ ಪ್ರದ್ಯುಮ್ನನಿಗೆ
ಅನಿರುದ್ಧ ಪುರುಷೋತ್ತಮಗೆ
ವಿನಯದಿಂದಲಿ ಅಧೋಕ್ಷಜಗೆ
ಆರತಿಯನೆತ್ತಿದರೆ |೪|

ನರಸಿಂಹರೂಪನಾದವಗೆ
ವರದ ಮೂರುತಿ ಅಚ್ಯುತಗೆ
ಅರಿಭಯಂಕರ ಜನಾರ್ದನಗೆ
ಆರತಿಯನೆತ್ತಿದರೆ |೫|

ಉಪೇಂದ್ರನೆಂದೆನಿಸಿಕೊಂಡವಗೆ
ಅಪಾರಮಹಿಮ ಶ್ರೀಹರಿಗೆ
ಗೋಪಾಲಮೂರುತಿ ಶ್ರೀಕೃಷ್ಣಗೆ
ಆರತಿಯನೆತ್ತಿದರೆ |೬|

ಚತುರವಿಂಶತಿ ಮೂರುತಿಗಳಾ
ಅತಿಶಯ ಧವಳವ ಪಾಡೆ
ಚತುರ ಪುರುಷರಿಷ್ಟಾರ್ಥವ,
ಈವನು ಸಿರಿ ಹಯವದನ |೭|


Aratiyanettidare kEshava nArAyaNage ||pa||
shAshvatavIva mAdhava
vAsavavaMdya gOviMdage ||a.pa||

dvApara rahita shrIviShNuvige
apAra madhusUdanage
pAparahita trivikramage
Aratiyanettidare |1|

sAdhusEvita vAmanage
shrIdhara hRuShIkEshanige
AdimUruti padmanABage
Aratiyanettidare |2|

dAma-udaradAluLLavage
prEmadi saMkaruShaNage
kAmitArthavanIva vAsudEvage
Aratiyanettidare |3|

ghanamahima pradyumnanige
aniruddha puruShOttamage
vinayadiMdali adhOkShajage
Aratiyanettidare |4|

narasiMharUpanAdavage
varada mUruti acyutage
ariBayaMkara janArdanage
Aratiyanettidare |5|

upEMdraneMdenisikoMDavage
apAramahima shrIharige
gOpAlamUruti shrIkRuShNage
Aratiyanettidare |6|

caturaviMshati mUrutigaLA
atishaya dhavaLava pADe
catura puruShariShTArthava,
Ivanu siri hayavadana |7|

Leave a Reply

Your email address will not be published. Required fields are marked *

You might also like

error: Content is protected !!