Jaya muneendrana

Composer : Shri Vyasarajaru

By Smt.Shubhalakshmi Rao

ವರ್ಣಿಸಲಳವೆ ಸುಗುಣಸಾಂದ್ರನ || ಪ ||
ಕರ್ಣಜನಕ ಕೋಟಿ ತೇಜ ಶ್ರೀಶ ಭಜಕ
ಜಯ ಮುನೀಂದ್ರನ || ಅ.ಪ ||

ಮಧ್ವಶಾಸ್ತ್ರ ದುಗ್ಧ ನಿಧಿಯೊಳ್
ಬುದ್ಧಿಯೆಂಬ ಮಂದರಗಿರಿಯ
ಶುದ್ಧ ನೇತ್ರ ಸೂತ್ರದಿಂದ
ಬದ್ಧ ಮಾಡಿ ಪಿಡಿದು ಕಡಿದು,
ಶುದ್ಧ ಯುಕುತಿ ಸುಧೆಯ ತೆಗೆದನ,
ಶಿಷ್ಯ ಜನಕೆ ಶ್ರದ್ಧೆಯಿಂದ ಲದನು ಎರೆದನ,
ಮೋದದಿಂದ ಕೃದ್ಧವಾದಿಗಳನು ಗೆಲಿದನ-
ಜಯ ಮುನೀಂದ್ರನ [೧]

ಮಾನನೀಯ ಶೀಲರಾದ ಮಾನವರ
ಕರೆದು ಹರಿಯ ಧ್ಯಾನದಲ್ಲಿ ನಿಲಿಸಿ ಒಲಿಸಿ
ಹಾನಿಯಿಲ್ಲದ ಮುಕುತಿ ಕೊಡುವ,
ಜ್ಞಾನಮತವ ಜನಕೆ ಸಾರ್ದನ,
ಶಿಷ್ಯಜನಕೆ ಸಾನುರಾಗದಿ ತತ್ವ ಪೇಳ್ದನ
ದೋಶ ದೂರ ದಾನವರಿಯ ಕಥೆಯ ಪೇಳ್ದನ –
ಜಯ ಮುನೀಂದ್ರನ [೨]

ಸರಸದಿಂದ ಮೂರೇಳು ವಿರಸ
ದುಷ್ಟ ಭಾಷ್ಯಗಳನು
ಮುರಿದಕ್ಷೋಭ್ಯ ತೀರ್ಥ ಯತಿಪ
ಕರಸಂಜಾತ ರಮ್ಯಚರಿತ,
ಶರಣ ಜನರ ಪೊರೆವ ಯತಿಪನ,
ಶಿಷ್ಯ ಜನರ ದುರುಳ ಮೋಹತಿಮಿರ ದಿನಪನ,
ನಮ್ಮ ಪರಮ-ಗುರು ಶ್ರೀಕೃಷ್ಣ
ಪಾದ ಭಜಕನ – ಜಯ ಮುನೀಂದ್ರನ [೩]


varNisalaLave suguNasAMdrana || pa ||
karNajanaka kOTi tEja SrISa Bajaka
jaya munIMdrana || a.pa ||

madhvaSAstra dugdha nidhiyoL
buddhiyeMba maMdaragiriya
Suddha nEtra sUtradiMda
baddha mADi piDidu kaDidu,
Suddha yukuti sudheya tegedana,
SiShya janake SraddheyiMda ladanu eredana,
mOdadiMda kRuddhavAdigaLanu gelidana-
jaya munIMdrana [1]

mAnanIya SIlarAda mAnavara
karedu hariya dhyAnadalli nilisi olisi
hAniyillada mukuti koDuva,
j~jAnamatava janake sArdana,
SiShyajanake sAnurAgadi tatva pELdana
dOsha dUra dAnavariya katheya pELdana –
jaya munIMdrana [2]

sarasadiMda mUrELu virasa
duShTa BAShyagaLanu
muridakShOBya tIrtha yatipa
karasaMjAta ramyacarita,
SaraNa janara poreva yatipana,
SiShya janara duruLa mOhatimira dinapana,
namma parama-guru SrIkRuShNa
pAda Bajakana – jaya munIMdrana [3]

Leave a Reply

Your email address will not be published. Required fields are marked *

You might also like

error: Content is protected !!