Composer : Shri Mohanadasaru
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಅವನಿದಿರು ಮೂರ್ಜಗದೊಳು ಲೋಕ
ಪಾವನ ಗುರುಸತ್ಯಬೋಧ ಯತೀಂದ್ರಗಿನ್ |ಪ|
ಬಲು ಸುಂದರ ಮೂಲ ರಘುಪತಿ |
ಪಾದ ನಳಿನ ಯುಗ್ಮವ ಪೂಜಿಪ ಯತಿ |
ಎಮಗೊಲಿದು ಪಾಲಿಸುವನು ಸನ್ಮತಿ |
ಈ ಜಲಜಭವಾಂಡದಿ ತುಂಬಿದ ಕೀರುತಿಗಿನ್ [೧]
ಪೀಳಿಗೆ ರಾಮ ದಿಗ್ವಿಜಯರಾಮ , ಸಿರಿ |
ಲೋಲ ವಿಠ್ಠಲ ವ್ಯಾಸ ಕೂರುಮ ,
ಕಮಲಾಲಯದೆ ಪ್ರೀಯ ಶುಭನಾಮದಿಂದ |
ವಾಲಗನೀಯುವ ಗುರು ಸಾರ್ವಭೌಮರಿಗಿನ್ [೨]
ಯತಿವರ ಶ್ರೀ ಸತ್ಯಪ್ರೀಯರ ಕರ |
ಶತಪತ್ರ ಭವ ಭಕ್ತರಾಧಾರ ,
ಮನ್ ಮಥನ ಮಾರ್ಗಣ ಗೆದ್ದ ಗಂಭೀರ ,
ರತಿ ಪತಿ ಪಿತ ಮೋಹನ ವಿಠ್ಠಲನ ಕಿಂಕರಗಿನ್ [೩]
avanidiru mUrjagadoLu lOka
pAvana gurusatyabOdha yatIMdragin |pa|
balu suMdara mUla raGupati |
pAda naLina yugmava pUjipa yati |
emagolidu pAlisuvanu sanmati |
I jalajaBavAMDadi tuMbida kIrutigin [1]
pILige rAma digvijayarAma , siri |
lOla viThThala vyAsa kUruma ,
kamalAlayade prIya SuBanAmadiMda |
vAlaganIyuva guru sArvaBaumarigin [2]
yativara SrI satyaprIyara kara |
Satapatra Bava BaktarAdhAra ,
man mathana mArgaNa gedda gaMBIra ,
rati pati pita mOhana viThThalana kiMkaragin [3]
Leave a Reply