Koosina kandira suprahladana

Composer : Shri Madhwesha vittala

ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ || ಪ ||

ರಾಕ್ಷಸ ಕುಲದಲಿ ಜನಿಸಿತು ಕೂಸು
ರಾಧಾಕೃಷ್ಣನ ಭಜಿಸಿತು ಕೂಸು
ರಾಗದ್ವೇಷಗಳ ಬಿಟ್ಟಿಹ ಕೂಸು
ರಾಮನ ಪಾದವ ನೆನೆಯುವ ಕೂಸು || ೧ ||

ಘನಹರಿ ಕಂಭದಿ ತೋರಿತು ಕೂಸು
ಗಳಿಸಿತು ಕೃಷ್ಣನ ಪ್ರೇಮವ ಕೂಸು
ಘಾಳಿಸುತನೆಂಬೊ ಖ್ಯಾತಿಯ ಕೂಸು
ಮಂತ್ರಾಲಯದಲಿ ವಾಸಿಪ ಕೂಸು || ೨ ||

ಪ್ರಸಿದ್ಧ ವ್ಯಾಸರಾಯನೆಂಬುವ ಕೂಸು
ಪ್ರವೀಣ ಪದ್ಯಯೊಳೆನಿಸುವ ಕೂಸು
ಪ್ರಹ್ಲಾದನೆಂಬೊ ಆಹ್ಲಾದದ ಕೂಸು
ಪ್ರಸನ್ನ ಮಧ್ವೇಶವಿಠಲನ ಕೂಸು || ೩ ||


kUsina kaMDIrA – suprahlAdana kaMDIrA || pa ||

rAkShasa kuladali janisitu kUsu
rAdhAkRuShNana Bajisitu kUsu
rAgadvEShagaLa biTTiha kUsu
rAmana pAdava neneyuva kUsu || 1 ||

Ganahari kaMBadi tOritu kUsu
gaLisitu kRuShNana prEmava kUsu
GALisutaneMbo khyAtiya kUsu
maMtrAlayadali vAsipa kUsu || 2 ||

prasiddha vyAsarAyaneMbuva kUsu
pravINa padyayoLenisuva kUsu
prahlAdaneMbo AhlAdada kUsu
prasanna madhvESaviThalana kUsu || 3 ||

Leave a Reply

Your email address will not be published. Required fields are marked *

You might also like

error: Content is protected !!