-
Koosina kandira suprahladana
Composer : Shri Madhwesha vittala ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ || ಪ || ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗದ್ವೇಷಗಳ ಬಿಟ್ಟಿಹ ಕೂಸುರಾಮನ ಪಾದವ ನೆನೆಯುವ ಕೂಸು || ೧ || ಘನಹರಿ ಕಂಭದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘಾಳಿಸುತನೆಂಬೊ ಖ್ಯಾತಿಯ ಕೂಸುಮಂತ್ರಾಲಯದಲಿ ವಾಸಿಪ ಕೂಸು || ೨ || ಪ್ರಸಿದ್ಧ ವ್ಯಾಸರಾಯನೆಂಬುವ ಕೂಸುಪ್ರವೀಣ ಪದ್ಯಯೊಳೆನಿಸುವ ಕೂಸುಪ್ರಹ್ಲಾದನೆಂಬೊ ಆಹ್ಲಾದದ ಕೂಸುಪ್ರಸನ್ನ ಮಧ್ವೇಶವಿಠಲನ ಕೂಸು || ೩ || kUsina kaMDIrA…
