Shri RamachandrAnghri – mangala

Composer : Shri Pranesha dasaru

By Smt.Shubhalakshmi Rao

ಶ್ರೀರಾಮ ಚಂದ್ರಾಂಘ್ರಿ ಸರಸೀರುಹ ಭೃಂಘನಿಗೆ |
ಧೀರಸುಧೀಂದ್ರ ಕರಸಂಭೂತಗೆ ||
ವಾರಾಹಿ ತೀರ ಮಂತ್ರಾಲಯನಿಕೇತನಿಗೆ
ಶ್ರೀರಾಘವೇಂದ್ರ ರಾಯರ ಚರಣಕೆ |೧ |
( ಜಯಮಂಗಳಂ ನಿತ್ಯ ಶುಭಮಂಗಳಂ )

ಪರಮ ತದ್ಧ್ವಾಂತ ಭಾಸ್ಕರಗೆ ಸ್ವರ್ಣಾಭಗೆ !
ಶರಣರಭಿಲಾಷೆ ಪೂರೈಸುವರಿಗೆ ||
ದರುಶನಾದಿ ತ್ರಿಭಾಷದರ್ಧ ಬಲ್ಲವರಿಗೆ ಮರುತಮತ ಕಡಲಿಗುಡುಪತಿಯೆನಿಪಗೆ | ೨ |
( ಜಯಮಂಗಳಂ ನಿತ್ಯ ಶುಭಮಂಗಳಂ )

ಪ್ರಾಣೇಶವಿಠ್ಠಲನವರೊಳು ಪ್ರೀತಿಯುಳ್ಳವಗೆ |
ಕ್ಷೋಣಿಯೊಳು ಸರಿಯಿಲ್ಲದ ಮಹಿಮನಿಗೆ |
ಧ್ಯಾನಕ್ಕೆ ಬಂದೊದಗುತಿಪ್ಪ ಗುರುರಾಯರಿಗೆ |
ಮೀನಾಂಕ ಜಿತಗೆ ದೇಶಿಕವರ್ಯಗೆ |೩ |
( ಜಯಮಂಗಳಂ ನಿತ್ಯ ಶುಭಮಂಗಳಂ )


SrIrAma caMdrAMghri sarasIruha BRuMghanige |
dhIrasudhIMdra karasaMBUtage ||
vArAhi teera maMtrAlayanikEtanige
SrIrAGavEMdra rAyara caraNake |1 |
( jayamaMgaLaM nitya SuBamaMgaLaM )

parama taddhvAMta BAskarage svarNABage !
SaraNaraBilAShe pUraisuvarige ||
daruSanAdi triBAShadardha ballavarige marutamata kaDaliguDupatiyenipage | 2 |
( jayamaMgaLaM nitya SuBamaMgaLaM )

prANESaviThThalanavaroLu prItiyuLLavage |
kShONiyoLu sariyillada mahimanige |
dhyAnakke baMdodagutippa gururAyarige |
mInAMka jitage dESikavaryage |3 |
( jayamaMgaLaM nitya SuBamaMgaLaM )

Leave a Reply

Your email address will not be published. Required fields are marked *

You might also like

error: Content is protected !!