Composer : Shri Kamalapati Vittala
ವೀಣೆಯ ನುಡಿಸಿದ ಪದವನೆ ಪಾಡಿದ |
ಬಲು ಚೆಲುವಾಗಿಹ ಅವರ್ ಯಾರೆ [ಪ]
ವೇಣುಗೋಪಾಲನ ಮನದಲಿ ಕುಣಿಸಿದ |
ಶ್ರೀಸುಧೀಂದ್ರ ಕರ ಜಾತರು ಇವರೆ [ಅ.ಪ]
ಮರುಗಿದ ತಾಯಿಗೆ ವಿಷ ಕುಡಿದಂಜದೆ |
ರತಿ ಪತಿ ಪಿತನಿವ ನಿಂತವರ್ ಯಾರೆ ||
ನರಹರಿಯನೆ ನೋಡಿ ಆನಂದದಲಿ ಇದ್ದ |
ಪ್ರಹ್ಲಾದರಾಜರು ಇವರೆ ಇವರೇ || ೧ ||
ಜಿಪುಣ ವಿರಾಗಿಯಾಗಿ ಬಂದವನೇ |
ವಿಠಲನೆಂದ್ ಹೇಳಿದ ಅವರ್ ಯಾರೆ ||
ಜಪ ತಪದಿಂದ ಕೃಷ್ಣನ ಪೂಜಿಸಿದ |
ವ್ಯಾಸರಾಯರು ಇವರೆ ಇವರೇ || ೨ ||
ಕಾಮವ ತೊರೆದು ಶ್ರೀರಾಮನ ಪೂಜಿಸಿ |
ವೃಂದಾವನದಲಿ ಇರುವವರ್ ಯಾರೆ ||
ಕಮಲಾಪತಿ ನಾರಾಯಣ ಧ್ಯಾನಿಪ |
ಗುರು ರಾಘವೇಂದ್ರರು ಇವರೆ ಇವರೇ || ೩ ||
veeNeya nuDisida padavane paaDida |
balu celuvaagiha avar yaare [pa]
vENugOpaalana manadali kuNisida |
shreesudheeMdra kara jaataru ivare [a.pa]
marugida taayige viSha kuDidaMjade |
rati pati pitaniva niMtavar yaare ||
narahariyane nODi aanaMdadali idda |
prahlaadaraajaru ivare ivarE || 1 ||
jipuNa viraagiyaagi baMdavanE |
viThalaneMd hELida avar yaare ||
japa tapadiMda kRuShNana poojisida |
vyaasaraayaru ivare ivarE || 2 ||
kaamava toredu shreeraamana poojisi |
vRuMdaavanadali iruvavar yaare ||
kamalaapati naaraayaNa dhyaanipa |
guru raaghavEMdraru ivare ivarE || 3 ||
Leave a Reply