Composer : Shri Vidyaratnakara Tirtharu
ರಾಘವೇಂದ್ರ ಸಲಹೋ ಗುಣಸಾಂದ್ರ || ಪ ||
ಭಗವದ್ಗೀತಾವಿವರಣ ತಂತ್ರ ದೀಪ
ನಿಗಮತತಿಗೆ ಖಂಡಾರ್ಥವ ರಚಿಸಿ
ಋಗರ್ಥಗಳನ್ನು ಅತಿ ಸ್ಪುಟವಾಗಿ ವಿವರಿಸಿ
ಖಗವಾಹನನ ತೋಷಪಡಿಸಿದ ಧೀರ || ೧ ||
ಧರಣಿದಿವಿಜರಿಗೆ ವರಗಳ ಕೊಡುವಂಥ
ಸುರತರುವೇ ನಿನಗೆ ಕರಗಳ ಮುಗಿದು
ಪರಮ ಪುರುಷಹರಿ ಚರಣಕಮಲದಲಿ
ಸ್ಥಿರವಾದ ಭಕುತಿಯ ಬೇಡುವೆ ಧೀರ || ೨ ||
ಚಂಡಕುಮತಗಳ ಖಂಡಿಸಿ ಬುಧಜನ
ಮಂಡಲದೊಳಗೆ ಪ್ರಚಂಡನೆಂದೆನಿಸಿ
ಕುಂಡಲಿಶಯನನ ಪಾದಮಂಡಿತ ಹೃದಯ ಭೂ
ಮಂಡಲದೊಳಗೆ ಅಖಂಡಲನಾದ || ೩ ||
ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ
ಪದ್ಧತಿ ಬಿಡದಂತೆ ಮಾಡಿ ಬುದ್ಧಿಯನಿತ್ತು
ಉದ್ದರಿಸಯ್ಯ ಕೃಪಾಬ್ಲಿಯೇ ಬುಧಜನಾ
ರಾಧ್ಯಚರಣ ಪರಿಶುದ್ಧ ಚರಿತ್ರ || ೪ ||
ಕಾಮಜನಕನಾದ ನಾಮಗಿರೀಶ್ವರ
ಸ್ವಾಮಿನೃಹರಿಪಾದ ತಾಮರಸಂಗಳ
ಪ್ರೇಮದಿ ಪೂಜಿಪೆನೆಂಬೋ ಕಾಮಿತ ವರ ನೀಡೋ
ಶ್ರೀಮತ್ಸುಧೀಂದ್ರಕರ ತಾಮರಸಭವನೇ || ೫ ||
rAGavEMdra salahO guNasAMdra || pa ||
BagavadgItAvivaraNa taMtra dIpa
nigamatatige KaMDArthava racisi
RugarthagaLannu ati spuTavAgi vivarisi
KagavAhanana tOShapaDisida dhIra || 1 ||
dharaNidivijarige varagaLa koDuvaMtha
surataruvE ninage karagaLa mugidu
parama puruShahari caraNakamaladali
sthiravAda Bakutiya bEDuve dhIra || 2 ||
caMDakumatagaLa KaMDisi budhajana
maMDaladoLage pracaMDaneMdenisi
kuMDaliSayanana pAdamaMDita hRudaya BU
maMDaladoLage aKaMDalanAda || 3 ||
SraddheyiMdali vara madhvAcAryara mata
paddhati biDadaMte mADi buddhiyanittu
uddarisayya kRupAbliyE budhajanA
rAdhyacaraNa pariSuddha caritra || 4 ||
kAmajanakanAda nAmagirISvara
svAminRuharipAda tAmarasaMgaLa
prEmadi pUjipeneMbO kAmita vara nIDO
SrImatsudhIMdrakara tAmarasaBavanE || 5 ||
Leave a Reply