Composer : Shri Tande Purandara vittala
ಏನ ಬೇಡಲಿ ನಿನ್ನ ಬಳಿಗೆ ನಾ ಬಂದು
ಮಾನದಿಂ ಸಲಹಯ್ಯ ಗುರು ರಾಘವೇಂದ್ರ [ಪ]
ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತು
ನೆನೆದು ಬಾರದದು ಎಲ್ಲ ಬಯಸುವುದು ಕೇಳೊ
ಅನುಭವಿಸಲಾರೆನೊ ಅದರ ಕಾಟಗಳನ್ನು
ಎನ್ನ ಉಬ್ಬಸವನ್ನು ಯಾರಲ್ಲಿ ಪೇಳುವೆನೊ (೧)
ಮನವೆಂಬ ಹೊಲೆಬಟ್ಟೆ ನೀರಲಿ ನೆನೆಯದು
ಉರಿವ ಬೆಂಕಿಯಲಿ ಉರಿಯಲೊಲ್ಲದು
ಪರಿಪರಿ ಬಗೆಯಲಿ ಕರುಣಿಸುವುದು ಎನ್ನನು
ಪರಮ ಪುರುಷ ನಿನ್ನ ಮೊರೆಹೊಕ್ಕೆ ನಾನೀಗ (೨)
ಒಂದು ಕ್ಷಣವಾದರು ಹರಿಯ ನೆನೆವೆನೆನಲು
ಒಂದಲ್ಲ ಎರಡಲ್ಲ ಹಲವು ತಾಪತ್ರಯವು
ತಂದೆ ಪುರಂದರವಿಠಲಗ್ ಅತಿಪ್ರೀತಿವಂತನೆ
ಒಂದುಪಾಯವಾದರೂ ಪೇಳಬಾರದೆ ಗುರುವೇ (೩)
Ena bEDali ninna baLige nA baMdu
mAnadiM salahayya guru rAGavEMdra [pa]
mana holegalisitu manavu mailigeyAytu
nenedu bAradadu ella bayasuvudu kELo
anuBavisalAreno adara kATagaLannu
enna ubbasavannu yAralli pELuveno (1)
manaveMba holebaTTe nIrali neneyadu
uriva beMkiyali uriyalolladu
paripari bageyali karuNisuvudu ennanu
parama puruSha ninna morehokke nAnIga (2)
oMdu kShaNavAdaru hariya nenevenenalu
oMdalla eraDalla halavu tApatrayavu
taMde puraMdaraviThalag atiprItivaMtane
oMdupAyavAdarU pELabArade guruvE (3)
Leave a Reply