Composer : Shri Gurugovinda dasaru
ಸ್ಮರಿಸಿ ಬದುಕಿರೊ | ಗುರು ರಾಘವೇಂದ್ರರಾ
ಚರಣ ಕಮಲವಾ | ದುರಿತ ತರಿಯುವಾ [ಪ]
ಯಂತ್ರೋದ್ಧಾರರಾ | ಅಂತರಂಗರಾ
ಮಂತ್ರ ಮಂದಿರಾ | ಕಾಂತಿ ಭೂತರಾ (೧)
ಕುಂತಿ ಜಾತರಾ ಏ | ಕಾಂತ ಭಕ್ತರಾ
ಸಂತ ಗುರಗಳ ನೀ | ವಿಂತು ನಂಬಿರೊ (೨)
ಪಂಕಜಾಕ್ಷನಾ | ಅಂಕ ಧರಿಸಿಹಾ
ಬಿಂಕ ಗುರುಗಳಾ | ಲಂಕೇಶನನುಜರಾ (೩)
ಖಂಪಾತಾಳ ಭೂ | ವ್ಯಾಪಿಸಿರುವರಾ
ಅಪಾರ ಮಹಿಮರಾ | ಕೋಪ ರಹಿತರಾ (೪)
ಮೂಕ ಬಧಿರರಾ | ನೇಕ ರೋಗಿಯರಾ
ನೂಕಿ ತಾಪವಾ | ದುಃಖ ಕಳೆಯುವಾ (೫)
ಮಾಯಿ ಮತಗಳಾ | ಸಾಯ ಬಡೆದರಾ
ಆರ್ಯ ಮಧ್ವರಾ | ಪ್ರೀಯ ಶಿಷ್ಯರಾ (೬)
ಗುರುಗೋವಿಂದ ವಿಠಲನಾ | ಚರಣ ಸರಸಿಜಾ
ನಿರುತ ಸ್ಮರಿಪರಾ | ವರವ ಕೊಡುವರಾ (೭)
smarisi badukiro | guru rAGavEMdrarA
caraNa kamalavA | durita tariyuvA [pa]
yaMtrOddhArarA | aMtaraMgarA
maMtra maMdirA | kAMti BUtarA (1)
kuMti jAtarA E | kAMta BaktarA
saMta guragaLa nI | viMtu naMbiro (2)
paMkajAkShanA | aMka dharisihA
biMka gurugaLA | laMkESananujarA (3)
KaMpAtALa BU | vyApisiruvarA
apAra mahimarA | kOpa rahitarA (4)
mUka badhirarA | nEka rOgiyarA
nUki tApavA | duHKa kaLeyuvA (5)
mAyi matagaLA | sAya baDedarA
Arya madhvarA | prIya SiShyarA (6)
gurugOviMda viThalanA | caraNa sarasijA
niruta smariparA | varava koDuvarA (7)
Leave a Reply