Composer : Shri Vyasarajaru
ಆರು ನಿನಗಿದಿರಧಿಕ ಧಾರುಣಿಯೊಳಗೆ
ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ [ಪ]
ಆರೊಂದು ವೈರಿಗಳ ತರಿದು ವೈಷ್ಣವರಿಗೆ
ಆರೆರಡು ಊರ್ಧ್ವ ಪುಂಢ್ರಗಳ ಇಡಿಸಿ
ಆರುಮೂರರ ಮೇಲೆ ಮೂರಧಿಕ ಕುಮತಗಳ
ಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ [೧]
ಆರುನಾಲ್ಕು ತತ್ವ-ದಭಿಮಾನಿಗಳಿಗೊಡೆಯ
ಮಾರುತನ ಮೂರನೆಯ ಅವತಾರನೆ
ಆರೈದು ಮೇಲೆರಡು ಅಧಿಕ ಲಕ್ಷಣವುಳ್ಳ
ಮೂರುತಿಯೊಳೊಪ್ಪುತಿಹ ಮುನಿವರೇಣ್ಯ [೨]
ಆರಾರುಮೇಲೊಂದು ಅಧಿಕಲೆಕ್ಕದ ಗ್ರಂಥ-
ಸಾರವನು ರಚಿಸಿ ಸಜ್ಜನಿರಿಗಿತ್ತು
ಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದ
ಉದಾರ ಶ್ರೀಕೃಷ್ಣನ ದಾಸರೊಳು ದೊರೆಯೆ [೩]
Aru ninagidiradhika dhAruNiyoLage
sAra SAstravanoreda sarvaj~ja munirAya [pa]
AroMdu vairigaLa taridu vaiShNavarige
AreraDu Urdhva puMDhragaLa iDisi
ArumUrara mEle mUradhika kumatagaLa
bErorasi kittomme bisuTaMtha dhIra [1]
ArunAlku tatva-daBimAnigaLigoDeya
mArutana mUraneya avatArane
Araidu mEleraDu adhika lakShaNavuLLa
mUrutiyoLopputiha munivarENya [2]
ArArumEloMdu adhikalekkada graMtha-
sAravanu racisi sajjanirigittu
pAramArthika BEda paMcaka sthApisida
udAra SrIkRuShNana dAsaroLu doreye [3]
Leave a Reply