Composer : Shri Vittalesha
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ |
ಘನ್ನ ಶ್ರೀ ಗುರು ರಾಘವೇಂದ್ರ ಸಂಪನ್ನ || ಪ ||
ಶ್ರೀ ರಾಘವೇಂದ್ರ, ಗುರು ರಾಘವೇಂದ್ರ
ಯತಿ ರಾಘವೇಂದ್ರ, ಮುನಿ ರಾಘವೇಂದ್ರ ||
ವರುಷ ವರುಷಕೆ ನಿನ್ನ ದರುಷನವ ದಯ ಮಾಡೋ |
ದುರಿತ ನಾಶನಗೈದು ಪರಿಶುದ್ಧ ಗೊಳಿಸೋ |
ಅರಿತು ಅರಿಯದೆ ಗೈದ ಪಾಪ ಕರ್ಮವ ಕಳೆದು |
ನಿರುತ ಶ್ರೀ ಹರಿ ಕೃಪೆಗೆ ಪಾತ್ರನೆಂದೆನಿಸೊ || ೧ ||
ನಿನ್ನ ಭಕುತರ ಪಾದ ರಜದೊಳಗೆ ಜೋಡಿಸೊ |
ನಿನ್ನ ಗುಣ ಕೀರ್ತನೆಯ ಕಿವಿಗಳಲಿ ನಿಲ್ಲಿಸೋ |
ನಿನ್ನ ಪಾದೋದಕದಿ ಪಾವನ ಮಾಡೆನ್ನ |
ನಿನ್ನ ರಘುಪತಿ ದಿವ್ಯ ದರುಷನವ ಕೊಡಿಸೋ || ೨ ||
ಮಂತ್ರ ಸದನದಿ ನಿನ್ನ ಸಂತಸ ಮಹೋತ್ಸವದಿ |
ಶಾಂತಿ ಸುಖ ಸಂಭ್ರಮದಿ ಸನ್ನಿಧಿಯೊಳಿರಿಸೋ |
ಸಂತ ಶರಣರ ಭಕುತಿ ನೃತ್ಯ ಗೀತೆಗಳ ನಿಂತು |
ನೋಡಿ ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೇ || ೩||
ಪ್ರಹ್ಲಾದರಾಜರೆ ಬಲ್ಲಿದರು ಜಗದೊಳಗೆ |
ನಿಲ್ಲದೇ ಕಾಯ್ವ ನರಹರಿ ದೂತರಹುದೋ |
ಎಲ್ಲ ರಾಜರ ರಾಜ ವ್ಯಾಸರಾಜರೇ ಸತ್ಯ |
ಇಲ್ಲಿ ಶ್ರೀ ಪರಿಮಳಾರ್ಯರ ಮಹಿಮೆಯೆ ಸ್ತುತ್ಯ || ೪ ||
ಏನು ಬೇಡಲಿ ನಿನ್ನ ದಾನಿ ಕರ್ಣನು ನೀನು |
ಜ್ಞಾನ ಸದ್ಭಕ್ತಿಯ ಕಲ್ಪವೃಕ್ಷ ಸುರಧೇನು |
ದೀನ ರಕ್ಷಕ ವಿಠ್ಠಲೇಶ ಕರುಣಾಭರಣ |
ಸಾನುರಾಗದಿ ನಿನ್ನ ಸೇವಕರೊಳು ಇರಿಸೋ || ೫ ||
ninna aMgaLadoLage hiDi anna hAkO |
ghanna shree guru rAghavEMdra saMpanna || pa ||
shrI rAghavEMdra, guru rAghavEMdra
yati rAghavEMdra, muni rAghavEMdra ||
varuSha varuShake ninna daruShanava daya mADO |
durita nAshanagaidu parishuddha goLisO |
aritu ariyade gaida pApa karmava kaLedu |
niruta shrI hari kRupege pAtraneMdeniso || 1 ||
ninna bhakutara pAda rajadoLage jODiso |
ninna guNa keertaneya kivigaLali nillisO |
ninna pAdOdakadi pAvana mADenna |
ninna raghupati divya daruShanava koDisO || 2 ||
maMtra sadanadi ninna saMtasa mahOtsavadi |
shAMti sukha saMbhramadi sannidhiyoLirisO |
saMta sharaNara bhakuti nRutya geetegaLa niMtu |
nODi naliyuva bhAgya koDu enage prabhuvE || 3||
prahlAdarAjare ballidaru jagadoLage |
nilladE kAyva narahari dootarahudO |
ella rAjara rAja vyAsarAjarE satya |
illi shree parimaLAryara mahimeye stutya || 4 ||
Enu bEDali ninna dAni karNanu nInu |
j~jAna sadbhaktiya kalpavRukSha suradhEnu |
deena rakShaka viThThalEsha karuNAbharaNa |
sAnurAgadi ninna sEvakaroLu irisO || 5 ||
Leave a Reply