Composer : Shri Madhwesha Vittala
ಬಂದ ದುರಿತಗಳ ಕಳೆಯೋ ತಂದೆ ಗುರುರಾಯ |
ಕಂದನ ಭವಣೆಯ ಇಂದು ನೋಡದಿರಯ್ಯ || ಪ ||
ನಿನ್ನ ಹೃದಯ ವಾಸಿ ನರಹರಿಯ ನಾಮವನು |
ಅನುದಿನವು ಬಿಡದೆ ಭಜಿಸುತಿರಲು |
ಇನಕಂಡ ಹಿಮದಂತೆ ತನು ಬಾಧೆ ಓಡುವುದು |
ಅನುಭವಕೆ ತಂದು ಕೊಡುವ ಮುನಿ ಶಿಖಾಮಣಿಯೇ || ೧||
ನಿನ್ನ ಬಾಧೆಯನು ಶ್ರೀ -ನರಹರಿಯು ಸಹಿಸದಲೆ |
ಸನ್ನತದಿ ಬಂದಂತೆ ಸುಧೀಂದ್ರ ಕರಜ |
ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ |
ಅನ್ಯ ನೆನಿಸದಲೆ ಶ್ರೀ -ಮೋದಾರ್ಯ ಮತಚಂದ್ರ || ೨ ||
ಪ್ರಹ್ಲಾದನೆಂದೆನಿಸಿ ತಂದೆ ಶಾಪವ ಕಳೆದೆ |
ಒಳ್ಳೆ ಶಾಸ್ತ್ರವ ಪೇಳಿ ಓಡಿಸಿದೆ ಮಾಯಿಗಳ |
ಬಲ್ಲಿದ ಮಧ್ವೇಶ ವಿಠ್ಠಲನ ಕೀರುತಿಯ |
ಮೇಲಾಗಿ ಪೊಗಳುವ ಮಂತ್ರಾಲಯ ವಾಸಿ || ೩ ||
baMda duritagaLa kaLeyO taMde gururAya |
kaMdana BavaNeya iMdu nODadirayya || pa ||
ninna hRudaya vAsi narahariya nAmavanu |
anudinavu biDade Bajisutiralu |
inakaMDa himadaMte tanu bAdhe ODuvudu |
anuBavake taMdu koDuva muni SiKAmaNiyE || 1||
ninna bAdheyanu SrI -narahariyu sahisadale |
sannatadi baMdaMte sudhIMdra karaja |
KinnanAgippenna cennAgi salahayya |
anya nenisadale SrI -mOdArya matacaMdra || 2 ||
prahlAdaneMdenisi taMde SApava kaLede |
oLLe SAstrava pELi ODiside mAyigaLa |
ballida madhvESa viThThalana kIrutiya |
mElAgi pogaLuva maMtrAlaya vAsi || 3 ||
Leave a Reply