Composer : Shri Madhwesha vittala
ಬಂದಾನೊ ರಾಘವೇಂದ್ರ ಇಂದಿಲ್ಲಿಗೆ
ಕಂದನ ಮೊರೆ ಕೇಳಿ ಜನನಿಯು ಬರುವಂತೆ |ಪ|
ಗಜವೇರಿ ಬಂದಾ ಜಗದಿ ತಾ ನಿಂತಾ
ಅಜಪಿತ ರಾಮನ ಪಾದಾಬ್ಜ ಸ್ಮರಿಸುತಲಿ (೧)
ಹರಿಯ ಕುಣಿಸುತ ಬಂದ ನರಹರಿ ಪ್ರೀಯ ಬಂದ
ಶರಣಾಗತರಾ ಕರವ ಪಿಡಿವೆನೆಂದು (೨)
ಪ್ರಹಲಾದ ವ್ಯಾಸ ಮುನೀಂದ್ರ- ರಾಘವೇಂದ್ರ
ನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ (೩)
baMdAno rAghavEMdra iMdillige
kaMdana more kELi jananiyu baruvaMte |pa|
gajavEri baMdA jagadi tA niMtA
ajapita rAmana pAdAbja smarisutali (1)
hariya kuNisuta baMda narahari prIya baMda
sharaNAgatarA karava piDiveneMdu (2)
prahalAda vyAsa munIMdra- rAghavEMdra
nilisuta manava madhvEsha viThThalanalli (3)
Leave a Reply