Avataratraya Suvvali – Madhwa Suvvali

Composer : Shri Vadirajaru

By Smt.Shubhalakshmi Rao

ಮಧ್ವ ಸುವ್ವಾಲಿ

ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನಾ ಸುವ್ವಿ
ಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ]

ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟು
ವಾಯುದೇವರಿಗೆ ಅಪ್ಪಣೆಯ ಮಾಡಿದ (೧)

ಜ್ಞಾನ ಕಲಿ ಕಾಲದಲ್ಲಿ ಶೂನ್ಯವಾಗಿ ಹೋಗುತಿರಲು
ಶ್ರೀರಮಣನ ಆಜ್ಞೆಯಿಂದ ವಾಯು ಮಧ್ವರಾದರು (೨)

ಅಚ್ಯುತನ ಪಾದ ಧ್ಯಾನ ತಮ್ಮ ಹೃದಯದಲ್ಲಿ ಇಟ್ಟು
ತಮ್ಮ ಕೀರ್ತಿ ಮೂರು ಲೋಕದಲ್ಲಿಯಿಟ್ಟರು (೩)

ಅಸುರ ಹೃದಯದಲ್ಲಿ ಸಂತಾಪವನ್ನು ಇಟ್ಟರು
ಸುರ ಮುನೀಶ್ವರರಲ್ಲಿ ಸುಖವನಿಟ್ಟರು (೪)

ಗರುಡಗಂಬದ ಮೇಲೆ ಒಬ್ಬ ಮರುಳು ಪುರುಷ
ಕುಣಿದು ಕುಣಿದು ಸರ್ವಜ್ಞರು ಜನಿಸುತ್ತಾರೆ ಎಂದು ಹೇಳಿದ (೫)

ಉರ್ವಿಯ ಮೇಲೆ ಇದ್ದ ಶುದ್ಧ ಸಾಧು ಜನರಿಗೆ
ಬುದ್ದಿ ಪ್ರಕಾಶವನ್ನು ಮಾಡಿ ಕೊಡುವರು (೬)

ಭೂಮಿಯ ಮೇಲೆ ಇದ್ದ ಶುದ್ಧ ಸಾಧು ಸಜ್ಜನರಿಗೆ
ಜ್ಞಾನ ಪ್ರಕಾಶವನ್ನು ಮಾಡಿ ಕೊಡುವರು (೭)

ಮಧ್ಯಗೇಹ ಭಟ್ಟರು ತಪಸ್ಸು ಮಾಡುತ್ತಿರಲು ವಾಸುದೇವ
ಉದ್ದರಿಪ ಮಗನ ಕೊಟ್ಟ ಮಧ್ವರಾಯರ (೮)

ನಾಲ್ಕು ತಿಂಗಳಾಗಿರಲು ಆ ಶಿಶುವನೆತ್ತಿ ಕೊಂಡು
ನಡೆದು ಬಂದರು ಅನಂತಶಯನಕೆ (೯)

ತಾಯಿಯ ಕೂಡಿಕೊಂಡು ದೇವರಿಗೆ ವಂದಿಸೆ
ನಡೆದು ಬಂದರು ಅನಂತಶಯನಕೆ (೧೦)

ಇಂದಿರೇಶನ ಪಾದ ನೆನೆದು ಆನಂದ ಭರಿತರಾದರು
ವಂದನೆಯ ಮಾಡಿ ಕೈಯ್ಯ ಮುಗಿದು ನಿಂತರು (೧೧)

ಮಗನ ಹರಕೆ ಒಪ್ಪಿಸಿ ಮನೆಗೆ ಬರುವ ಕಾಲದಲ್ಲಿ
ಒಡೆದು ಬ್ರಹ್ಮ ಶಿಶುವಿನಾ ಮಹಿಮೆ ಹೇಳಿತು (೧೨)

ಕುಲದೇವತೆಯ ಕಂಡು ತಿರುಗಿ ಬರುವ ವೇಳ್ಯದಲ್ಲಿ
ಒಡೆದು ಬ್ರಹ್ಮ ಶಿಶುವಿನಾ ಮಹಿಮೆ ಹೇಳಿತು (೧೩)

ಹೊರಗೆ ಮಗನ ಬಿಟ್ಟು ತಾಯಿ ಮನೆಯ ಕೆಲಸಕ್ಹೋದಲು
ತಡೆದಳೆಂದು ಬಿಕ್ಕಿ ಬಿಕ್ಕಿ ಅಳುತಲಿದ್ದಿತು (೧೪)

ಎತ್ತಿಕೊಂಡರೊಲ್ಲದು ಬಿಕ್ಕಿ ಬಿಕ್ಕಿ ಅಳುತಿರಲು
ಕುಚ್ಚಿದ ಹುರುಳಿಯನ್ನು ತಿನಿಸುತ್ತಿದ್ದಳು (೧೫)

ಎತ್ತಿ ಗಿಟ್ಟ ಹುರುಳಿಯನ್ನು ಚಿಕ್ಕವಗೆ ತಿನಿಸುವರೆ
ಸಿಟ್ಟಿನಿಂದ ಮಗಳನ್ನು ಜಬರ್ಸಿ ಕೊಂಡಳು (೧೬)

ಮರಳುತಿರಲು ಕೇಲಿಯೊಳಗೆ ಹುರುಳಿ ತಿನಲು ಮಧ್ವರು
ಹರಿಯೆ ಮಗನ ರಕ್ಷಿಸೆಂದು ಬೇಡಿಕೊಂಡರು (೧೭)

ಅರುಣ ಉದಯದಲ್ಲಿ ಎದ್ದು ಗೂಳೀಯ ಬಾಲ ಹಿಡಿದು
ಅರಣ್ಯದ ಒಳಗೆ ಸಂಚಾರ ಮಾಡಿದರು (೧೮)

ಋಣವಾ ಪಿತನ ಬೇಡಿದವಗೆ ಹುಣಿಸೆ ಬಿತ್ತ ಆಡುತಿರಲು
ಎಣಿಸಿಕೊಡಲು ಮುಕ್ತಿ ಹೇತು ಆಯಿತಾತಗೆ (೧೯)

ತವರು ಮನೆಯ ಒಳಗೆ ಮದುವೆ ಸಂಭ್ರಮ ಆಗುತಿರಲು
ಮಗನ ಮೇಲಿನ ಹಂಬಲವ ಮರೆತು ಬಿಟ್ಟಳು (೨೦)

ಎರಡು ವರ್ಷವಾಗಲು ಶಿಶುವು ತೊದಲು ನುಡಿಯುತ
ನಡೆಉ ಬಂದಿತು ಅನಂತಶಯನಕೆ (೨೧)

ಎಲ್ಲಿಗೆ ಪಯಣವೆಂದು ಎಲ್ಲ ಜನರು ಕೇಳಲು
ನಮ್ಮ ಸ್ವಾಮಿ ದರುಶನಕೆ ಬಂದೆವೆಂದರು (೨೨)

ಚಿಕ್ಕವನ ಕಾಣದೆ ದಿಕ್ಕು ದಿಕ್ಕು ಹುಡುಕುತಾ
ಚಚ್ಚರದಿ ಬಂದರು ಅನಂತಶಯನಕೆ (೨೩)

ಬಾಲಕನ ಕಾಣದೆ ಕೇರಿ ಕೇರಿ ಹುಡುಕುತ
ಬೇಗದಿಂದ ಬಂದರು ಅನಂತಶಯನಕೆ (೨೪)

ಚಿಕ್ಕವನ ಎತ್ತಿಕೊಂಡು ಭಾಹೋದನ್ನು ಕಂಡರು
ಬಿಟ್ಟ ನಿಧಿಯೆನ್ನ ಕೈಗೆ ಸಿಕ್ಕಿತೆಂದರು (೨೫)

ಬಾಲಕನ ಎತ್ತಿಕೊಂಡು ಬಾಹೋದನ್ನು ಕಂಡರು
ಹೋದ ನಿಧಿ ಎನ್ನ ಕೈಗೆ ಸೇರಿತೆಂದರು (೨೬)

ಮಧ್ಯ ಗೇಹ ಭಟ್ಟರು ಮಗನ ಕಂಡು ಅಪ್ಪಿಕೊಂಡು
ಉದ್ಧರಿಸೋ ಸ್ವಾಮಿಯೆಂದು ಬೇಡಿಕೊಂಡರು (೨೭)

ಶಿವಭಟ್ಟನ ಪುರಾಣ ಶಿಶುವು ಕೇಳಿ ದೂಷಿಸಿ
ಸಕಲ ಜನರ ಮನಸ್ಸಿಗ್-ಹರುಷ ಮಾಡಿಕೊಟ್ಟರು (೨೮)

ಬಾಲಕರ ಕೂಡಿಕೊಂಡು ವನದೊಳಗೆ ಆಡುತಿರಲು
ಕಾಲದಲ್ಲಿ ಮುಂಜಿ ಆಯ್ತು ಕಮಲ ನಯನಗೆ (೨೯)

ಉಪನಿಷತ್ತು ಶಾಸ್ತ್ರ ಓದಿ ವನದೊಳಗೆ ಇರುತಿರಲು
ಕಿವಿಯ ಊದಿ ತಲೆಯ ಬೇನೆ ಬಿಡಿಸಿದ ಗುರುವಿಗೆ (೩೦)

ಸಾಧನಿ ದ್ವಾದಶಿ ಬರಲು ನೀರಿಲ್ಲದೆ ಮಿಡುಕುತಿರಲು
ಬೇಗದಿಂದ ಸರೋವರ ನಿರ್ಮಾಣ ಮಾಡಿದರು (೩೧)

ಆಲದ ವೃಕ್ಷ ತಂದು ತಲೆಕೆಳಗೆ ಮಾಡಿ ಬಿತ್ತೆ
ಕೊನೆಯ ಕೊಂಬಿನಿಂದ ಫಲ ಪುಷ್ಪವಾಯಿತು (೩೨)

ಮಣಿಮಂತನೆಂಬೋ ದೈತ್ಯ ಮೈಗೆ ಸುತ್ತಿ ಬರುತಿರಲು
ಎಡದ ಪಾದದಿಂದ ಅವನ ಒರಿಸಿ ಬಿಟ್ಟರು (೩೩)

ಬಾಲಕರ ಕೂಡಿಕೊಂಡು ವಿಮಾನ ಗಿರಿಯಲಾಡುತಿರಲು
ಬಾರೋ ವಾಸುದೇವನೆಂದು ಮಗನ ಕರೆದಳು (೩೪)

ತಾಯಿ ಕರೆದಳೆಂದು ವಿಮಾನ ಗಿರಿಯ ಧುಮುಕಿದರು
ಪಾದ ಊರಿ ಜಗವ ಪಾವನವ ಮಾಡಿದರು (೩೫)

ಯೋಗ ಪಟ್ಟ ಧರಿಸಿದ ಜಡೆಗಳ ಮಸ್ತಕವು
ಬೇಗದಿಂದ ಸನ್ಯಾಸಿ ಆಗುವೆ ನೆಂದರು (೩೬)

ವರುಷ ನೋಡು ಬಾಲ ನೀನು ಬಯಸಬೇಡ ಸನ್ಯಾಸ
ಬಹಳ ತಪಸ್ಸಿನಿಂದ ನಿನ್ನ ಪಡೆದೇ ನೆಂದಳು (೩೭)

ಹಾಲು ಅನ್ನವನ್ನು ಉಂಡು ಬಹಳ ಕಷ್ಟಪಟ್ಟು ಪಡೆದೆ
ಬಾಳ ನಿನಗೆ ಸನ್ಯಾಸ ಬೇಡವೆಂದಳು (೩೮)

ಹೆನ್ನೆರಡು ಸಾವಿರ ವರುಷ ಚೆನ್ನಾಗಿ ತಪ ಮಾಡಿ
ಬಾಲ ನಿನಗೆ ಸನ್ಯಾಸ ಬೇಡವೆಂದಳು (೩೯)

ಬಿಕ್ಷದನ್ನವನ್ನೆ ಉಂಬ ಅಪೇಕ್ಷೆಯುಳ್ಳ ಮಗನ ಪಡೆದೆ
ರಕ್ಷಣೆಯ ಮಾಡುವರ ಕಾಣೆನೆಂದಳು (೪೦)

ವಿಷ್ಣು ತೀರ್ಥರೆಂಬ ಮಗನ ಕೊಟ್ಟು ತಾಯ ಸಂತೈಸಿ
ಅಪ್ಪಣೆಯ ಕೊಂಡು ಆಶ್ರಮಕ್ಕೆ ಬಂದರು (೪೧)

ಉಟ್ಟ ಧೋತ್ರ ವನ್ನು ಬಿಚ್ಚಿ ಕೌಪೀನ ಕಟ್ಟಿಕೊಂಡು
ಆನಂದತೀರ್ಥರೆಂಬ ಸನ್ಯಾಸಿ ಆದರು (೪೨)

ಮೂಲ ಗುರುವು ನೋಡಿರೋ ಹಳೆವಲ್ಲಿ ಒದ್ದವರ
ಸುರಮುನೀಶ್ವರರು ಕಂಡು ಹರುಷ ಬಟ್ಟರು (೪೩)

ಪಾಪಿ ಅಲ್ಲ ಕೋಪಿ ಅಲ್ಲ ಪಾಪಿ ಬೊಮ್ಮನು ಅಲ್ಲ
ಪಾಪಿ ಮಾಯಾವಾದಿ ಮತವ ಮುರಿದು ಬಿಟ್ಟರು (೪೪)

ಜ್ಞಾನ ಬೋಧ ಯೆಂಬವನ ದೂರಕ್ಕೆ ಓಡಿಸಿ ಶ್ರೀ
ಮನ್ನಾರಾಯಣನೆ ಪರದೇವತೆ ಎಂದು ನುಡಿದರು (೪೫)

ಮಾಯಾವಾದಿಗಳೆಲ್ಲ ವಾದ ಮಾಡುವೇವೆವೆನುತ ಬರಲು
ಕಾಣಿಸೀ ಕೊಳ್ಳದ್ಹಾಂಗೆ ಓಡಿ ಹೋದರು (೪೬)

ಕೇರಳ ದೇಶಕ್ಕೆ ಹೋಗಿ ಮಧ್ವರಾಯರು
ಮಾಯಾವಾದಿಗಳ ಕಾಲು ಸೆಳೆದು ಬಿಟ್ಟರು (೪೭)

ಭಕ್ತ ಜನರ ಮನೆಯೊಳಗೆ ಲೆಕ್ಕವಿಲ್ಲದ ಹಣ್ಣು ಮೆದ್ದು
ಅಕ್ಷಯವಾಗಲೆಂದು ಅವರಿಗೆ ಮೋಕ್ಷ ಕೊಟ್ಟರು (೪೮)

ದಂಡ ಪೊತ್ತು ಶಂಕರನ ಕೋಲು ಮುರಿದು ಬಿಸುಡೆಂದು
ಭಂಗಪಡಿಸಿ ಮುಂದೆ ಹಿಡಿದು ನಿಲ್ಲಿಸಿದರು (೪೯)

ಗುರುಗಳ ಮನಸಿನ ವ್ಯಾಕುಲಂಗಳ ಕಳೆದು
ಗೀತಾ ಭಾಷ್ಯವನ್ನು ಮಾಡಿಕೊಟ್ಟರು (೫೦)

ಮರಳಿ ಬದರಿಕಾಶ್ರಮಕ್ಕೆ ತೆರಳಿ ಮಧ್ವರಾಯರು
ಪರ್ವತವ ಕಂಡು ಆಶ್ಚರ್ಯ ಪಟ್ಟರು (೫೧)

ಪರ್ವತದ ಹಿರಿಮೆಯನ್ನು ವರ್ಣಿಸಲಳವಲ್ಲ
ಗರುಡ ಶೇಷ ರುದ್ರರಾರಿಂದಲಾದರೂ (೫೨)

ಭಕ್ತಿ-ಭಾವದಿಂದ ಮಧ್ವರ ಬಗ್ಗಿ ಮುನಿಗಳೆಲ್ಲ ನೋಡಿ
ಮುಕ್ತಿದಾತರಿಗೆರಗಿ ಸ್ತೋತ್ರ ಮಾಡುತಿದ್ದರು (೫೩)

ಯೋಗ ಪಟ್ಟ ಧರಿಸಿದ ಜಡೆಗಳ ಮಸ್ತಕವು
ಯೋಗಿಗಳನು ಕಂಡರು ಮಧ್ವರಾಯರು (೫೪)

ಸರಸಿಜಾಕ್ಷನ ಹೊಳೆಯುವ ಹಸ್ತ ಮಸ್ತಕ ಮೈಯ್ಯ ಬಣ್ಣ
ಚರಣ ಕಮಲ ಲೋಚನದವರ ಕಂಡರು (೫೫)

ಇಂದಿರೇಶನ ಪಾದ ಕಂಡು ಆನಂದ ಭರಿತರಾಗಿ
ವಂದನೆಯ ಸ್ತೋತ್ರವ ಮಾಡುತಿದ್ದರು (೫೬)

ಇಂದಿರೇಶ ಶ್ರೀಮದಾನಂದತೀರ್ಥ ರಪ್ಪಿಕೊಂಡು
ಚೆಂದದಿಂದ ಏಕಾಂತ ಆಡುತಿದ್ದರು (೫೭)

ಈ ತೀರ್ಥಕ್ಕೆ ಸರಿಯಿಲ್ಲ ಈ ಕ್ಷೇತ್ರಕ್ಕೆ ಸಮವಿಲ್ಲ
ಶಾಸ್ತ್ರ ಅರ್ಥದಿಂದ ನಿರ್ಣಯವ ಮಾಡಿದರು (೫೮)

ಗುರುಗಳಾಜ್ಞೆಯಿಂದ ಮಧ್ವರು ತೆರಳಿ ಭರತ ಖಂಡದಲಿ
ನರರಿಗೆ ಹರಿಯ ಸ್ತೋತ್ರಗಳನು ಮಾಡಿದರು (೫೯)

ಶೋಭನಭಟ್ಟರು ಶ್ರೀಮದಾಚಾರ್ಯರ
ಪಾದದ ಮೇಲೆ ಬಿದ್ದು ಶಿಷ್ಯರಾದರು (೬೦)

ಶೋಭನ ಭಟ್ಟರು ಶ್ರೀಮದಾಚಾರ್ಯರ
ಪಾದತೊಳೆದು ಚಾಮರವ ಹಾಕುತಿದ್ದರು (೬೧)

ಭರತಖಂಡವನೆಲ್ಲ ಚರಿಸಿ ಮಧ್ವರಾಯರು
ಉಡುಪಿ ಎಂಬ ಕ್ಷೇತ್ರದಲ್ಲಿ ವಾಸ ಮಾಡಿದರು (೬೨)

ಅಚ್ಯುತಪ್ರೇಕ್ಷಾಚಾರ್ಯರ ಚಿತ್ತ ನಿರ್ಮಲಗೊಳಿಸಿ
ವಿಷ್ಣು ಸರ್ವೋತ್ತಮನೆಂಬ ಜ್ಞಾನ ಮಾಡಿ ಕೊಟ್ಟರು (೬೩)

ಕಡಲ ಮಧ್ಯದಲ್ಲಿ ಒಂದು ಹಡಗು ಬಂದು ನಿಂತಿರಲು
ಕಂಡು ಮಧ್ವರಾಯರು ಕೈಯ ಬೀಸಿದರು (೬೪)

ಯೋಗದಿಂದ ದಡಕೆ ಬರಲು ಶ್ರೀಮದಾಚಾರ್ಯರಿಗೆ
ಏನು ಬೇಕಾದ್ದು ಬೇಡಿ ಕೊಡುವೆ ಎಂದರು (೬೫)

ಮುತ್ತು ಮಾಣಿಕ್ಯ ಏಕೆ ಚಿನ್ನ ಬೆಳ್ಳಿ ನಮಗೆ ಏಕೆ
ಬೇಡುವೆವು ಮೂರು ಗೋಪೀ ಚಂದನ ಎಂದರು (೬೬)

ಶ್ರೀಮದಾಚಾರ್ಯರಿಗೆ ಬಹಳ ಸಂತೋಷದಿಂದ
ಮೂರು ಗೊಪೀ ಚಂದನದ ಗಡ್ಡೆ ಕೊಟ್ಟರು (೬೭)

ಒಂದೊಂದನು ಹೆಗಲಲಿಟ್ಟು ಒಂದುಗಡ್ಡೆ ಶಿರದಲಿಟ್ಟು
ಚೆಂದದಿಂದ ದ್ವಾದಶ ಸ್ತೋತ್ರ ಹೇಳುತ ಬಂದರು (೬೮)

ಆಗಲೊಂದು ಗಡ್ಡೆ ಒಡೆಯೆ ರಾಮಮೂರುತಿ ಇರಲು
ಮತ್ತೊಂದು ಗಡ್ಡೆ ಬಿದ್ದು ದುರ್ಗೆ ಜನಿಸಿ ಹೋದಳು (೬೯)

ವಾರಿಧಿಯೊಳಗೆ ಇದ್ದ ದ್ವಾರಕೆಯ ಕೃಷ್ಣನ
ದ್ವಾದಶ ಸ್ತೋತ್ರ ಹೇಳುತ ಕೊಂಡು ಬಂದರು (೭೦)

ರಜತಪೀಠ ಪುರದೊಳಗೆ ರಾಜಮಂದಿರವ ಮಾಡಿ
ರಮ್ಯಮೂರ್ತಿ ಕೃಷ್ಣನ ಪ್ರತಿಷ್ಠಿಸಿದರು (೭೧)

ಕೃಷ್ಣ ವೇದವ್ಯಾಸರ ಮೂರ್ತಿಯ ಪ್ರತಿಷ್ಠೆ ಮಾಡಿ
ತ್ರಿಕಾಲದಲ್ಲಿ ಪೂಜೆ ಮಾಡುತಿದ್ದರು (೭೨)

ಅಷ್ಟ ವರ್ಷದ ಬಾಲಕರಿಗೆ ಕೊಟ್ಟು ಸನ್ಯಾಸವನ್ನು
ಶ್ರೀಕೃಷ್ಣನ ಪೂಜೆ ಸಾಂಗ ಮಾಡಿಸಿದರು (೭೩)

ಕೃಷ್ಣನ ಪ್ರತಿಮೆ ಎರಡು ವಿಠಲನ ಪ್ರತಿಮೆ ಮೂರು
ವರಹ ನೃಸಿಂಹ ರಾಮನ ಪ್ರತಿಮೆ ಕೊಟ್ಟರು (೭೪)

ಎಂಟು ಮಠದವರಿಗೆ ಎಂಟು ಮೂರುತಿ ಕೊಟ್ಟು
ಸಂತತ ಪೂಜೆ ಸಾಂಗ ಮಾಡಿಸಿದರು (೭೫)

ಎರಡು ತಿಂಗಳಿಗೊಂದು ಪರ್ಯಾಯವನ್ನು ಮಾಡಿ
ಸರಸಿಜಾಕ್ಷನ ಪೂಜೆ ಸಾಂಗ ಮಾಡಿಸಿದರು (೭೬)

ಉರ್ವಿ ಮೇಲೆ ಉಳ್ಳ ಶುದ್ಧ ತೀರ್ಥಂಗಳ ತಂದು
ಮಧ್ವ ಸರೋವರವ ನಿರ್ಮಾಣ ಮಾಡಿದರು (೭೭)

ಉಷಃ ಕಾಲದಲ್ಲಿ ಎದ್ದು ಶ್ರೀಕೃಷ್ಣನ ಪೂಜಿಸಿ
ಸಾಯಂಕಾಲದಲ್ಲಿ ಸುಬ್ರಹ್ಮಣ್ಯಕ್ಕೆ ಬಂದರು (೭೮)

ಮಧ್ಯಾಹ್ನ ಕಾಲದಲ್ಲಿ ಮಥ್ಯತಾಳ ಮಠಕೆ ಬಂದು
ಮಧ್ವರಾಯರ ಮಹಿಮೆ ಮೂರು ಜಗವ ತುಂಬಿತು (೭೯)

ಕೋಟಿ ಸೂರ್ಯರ ಬೆಳಕು ಕಲಶಗೋಪುರದ ಕಾಂತಿ
ವಾಸುದೇವನ ಪಟ್ಟಣದೊಳು ಶೋಭಿಸುತಿದ್ದುವು (೮೦)

ಅಚ್ಯುತನ ಪಟ್ಟಣದೊಳು ಚಿತ್ರಭೂಸುರರು ಎಲ್ಲ
ಪರಿಪರಿ ಕ್ರೀಡೆಗಳ ಆಡುತಿದ್ದರು (೮೧)

ಈಶ್ವರ ಭೂಮಿಯ ತೋಡು ಹೋಗು ಎಂದರೆ
ತೊರಿಸಿ ಕೊಟ್ಟರೆ ನಾ ತೊಡುವೆನೆಂದರು (೮೨)

ತೋರಿಸಿ ಕೊಡುವೆನೆನುತ ನೆಲಕೆ ಗುದ್ದಲಿ ಹಾಕೆ
ತೋಡಿ ತೋಡಿದ್-ಹಾಂಗೆ ನೆಟ್ಟನಾಗಿ ಹೋದರು (೮೩)

ನಾವೆ ಇಲ್ಲದೆ ನದಿಯ ಹೇಗೆ ದಾಟದಿರಿ ಎಂದು
ಕಾವಲಿದ್ದ ದೂತರೆಲ್ಲ ಕೇಳುತಿದ್ದರು (೮೪)

ಜಗವನೆಲ್ಲ ರಕ್ಷಿಸುವ ಸ್ವಾಮಿ ನಮ್ಮ ರಕ್ಷಿಸುವ
ಅವರಿಗೆ ತಕ್ಕ ಮಾತನಾಡಿ ಮುಂದೆ ನಡೆದರು (೮೫)

ಕಾವಿಯ ವಲ್ಲಿಯನ್ನು ಗಂಟು ಕಟ್ಟಿ ಬಿಸುಡಲು
ತಮ್ಮ ತಮ್ಮೊಳೆ ಕಡಿದಾಡಿ ಮಡಿದರೆಲ್ಲರು (೮೬)

ಕಳ್ಳರೆಲ್ಲ ಅಟ್ಟಿ ಬರಲು ಕಲ್ಲಾಗಿ ನಿಂತರು
ಕಲ್ಲು ಎಂದು ಕಳ್ಳರೆಲ್ಲ ಬಿಟ್ಟು ಹೋದರು (೮೭)

ಕತ್ತಲೊಳಗೆ ನದಿಯ ದಾಟಿ ವಸ್ತ್ರ ತೋಯದ್-ಹಾಂಗೆ ಬರಲು
ಮೆಚ್ಚಿ ದೊರೆಯು ದೂತರ ಕಳುಹಿ ಕೊಟ್ಟನು (೮೮)

ಮುವತ್ತು ಕೊಡದ ಹಾಲು ಮೂರು ಸಾವಿರ ಹಣ್ಣು ಮೆದ್ದು
ಆತ್ಮದಲ್ಲಿ ಜೀರ್ಣವಾಯ್ತು ಅನಿಲತನಯಗೆ (೮೯)

ಶ್ರೀಮದಾಚಾರ್ಯರ ವ್ಯಾಖ್ಯಾನ ಕಾಲದಲ್ಲಿ
ಆದಿಶೇಷ ತಾನು ಬಂದು ಕೇಳುತಿದ್ದನು (೯೦)

ಮಾಯಾವಾದಿ ತಾರಕನ ಸೂರ ಭೇದಿಸಲಾರನು
ಮಧ್ವರಾಯರೆಂಬ ಅಗ್ನಿ ಜಯಿಸಿ ಬಿಟ್ಟಿತು (೯೧)

ಜಾಲಗಾರ ಮೀನವನ್ನು ಯಾವ ಪರಿಯಲೆಳೆವನು
ಮಧ್ವರಾಯರು ಹಾಗೆ ಮುದ್ರಾಂಕನ ಮಾಡಿದರು (೯೨)

ಶ್ರೀಮದಾಚಾರ್ಯರ ದ್ವಾದಶ ನಾಮ ಒಣಗಲು
ಬೇಗ ಶಿಷ್ಯ ತುಳಸಿ ವನಮಾಲೆ ಹಾಕಿದ (೯೩)

ರಾಜಸಿಂಹರಾಯನು ಶ್ರೀಮದಾಚಾರ್ಯರ
ಪಾದದ ಮೇಲೆ ಬಿದ್ದು ಶಿಷ್ಯನಾದನು (೯೪)

ತ್ರಿವಿಕ್ರಮ ಪಂಡಿತರು ಶ್ರೀಮದಾಚಾರ್ಯರ
ಪಾದದ ಮೇಲೆ ಬಿದ್ದು ಶಿಷ್ಯರಾದರು (೯೫)

ಶೋಭನ ಭಟ್ಟರು ಶ್ರೀಮದಾಚಾರ್ಯರಿಗೆ
ರಾಜ ಸಭೆಯೊಳಗೆ ಪುಸ್ತಕ ಕೊಡಿಸಿದರು (೯೬)

ರಾಜಸಿಂಹ ರಾಯನು ಶ್ರೀಮದಾಚಾರ್ಯರಿಗೆ
ರಾಜ ಸಭೆಯೊಳಗೆ ಪುಸ್ತಕ ಕೊಟ್ಟನು (೯೭)

ಶ್ರೀಮದಾಚಾರ್ಯರು ಸ್ನಾನಕ್ಕೆ ಹೋಗಲು
ಬೇಗ ಶಿಷ್ಯರೆಲ್ಲ ಸೇವೆ ಮಾಡುತಿದ್ದರು (೯೮)

ಶ್ರೀಮದಾಚಾರ್ಯರು ಸ್ನಾನಕ್ಕೆ ಹೋಗಲು
ಬೇಗ ಗಂಗೆ ಬಂದು ನೆಲೆಸಿ ಪವಿತ್ರಳಾದಳು (೯೯)

ದ್ವಾದಶಾದಿತ್ಯರು ಏಕಕಾಲಕುದಿಸಿದಂತೆ
ಶ್ರೀಮದಾಚಾರ್ಯರ ದ್ವಾದಶನಾಮ ಹೊಳೆದವು (೧೦೦)

ಅಂದು ಆ ದೇಶದಲ್ಲಿ ಅನಾವೃಷ್ಟಿ ಆಗಿರಲು
ದಂಡ ಕೋಲು ತಿರುಗಿಸಿ ತೀರ್ಥ ಮಾಡಿದರು (೧೦೧)

ಸುತ್ತ ಮುತ್ತ ಭೂಮಿಯನ್ನು ಒತ್ತಿ ಕಾಲುವೆ ತೆಗೆಸಿ
ಬತ್ತ ಬೆಳೆಸುತ್ತಿದ್ದರೀ ವಿಚಿತ್ರ ಮಹಿಮರು (೧೦೨)

ವ್ಯಾಖ್ಯಾನ ಕಾಲದಲ್ಲಿ ದೀಪ ಶಾಂತವಾಗುತಿರಲು
ಜ್ಯೋತಿರ್ಮಯ ಮಾಡಿದರು ಅಂಗುಷ್ಠದಿಂದಲೆ (೧೦೩)

ಗಂಡವಾಟ ಎಂಬುವನು ಗಳನ ಹಿಡಿದು ಒತ್ತಿ ಒತ್ತಿ
ತುಂಡು ಮುಂಡಾಗಿ ಭೂಮಿ ಮೇಲೆ ಬಿದ್ದನು (೧೦೪)

ಅಣು ಮಹತ್ತುಗಳೆಲ್ಲ ನಿಮಿಷದೊಳಗೆ ಮಾಡಿಕೊಟ್ಟು
ಹುಡುಗನ ಹೆಗಲೇರಿ ದೇವಾಲಯಕೆ ಬಂದರು (೧೦೫)

ಪೂರುವ ಎಂಬುವನು ಶ್ರೀಮದಾಚಾರ್ಯರ
ಮೂಗಿನ ಮೇಲೆ ಬಿದ್ದು ಪತನವಾದನು (೧೦೬)

ಕೊಕ್ಕಡದೊಳಗೆ ಉಳ್ಳ ಮುಪ್ಪಿನ ಬ್ರಾಹ್ಮಣಗೆ
ಕೃಷ್ಣಾಮೃತ ಮಹಾರ್ಣವ ಹೇಳಿ ಕೊಟ್ಟರು (೧೦೭)

ಶ್ರೀಮದಾಚಾರ್ಯರಿದ್ದು ಅಷ್ಟಮಿ ಪರ್ಯಂತ
ಎರಡು ಮುಹೂರ್ತದೊಳೆ ಬದರಿಕಾಶ್ರಮಕೆ ಬಂದರು (೧೦೮)

ಬದರಿಕಾಶ್ರಮಕೆ ಬಂದು ಬದರಿ ನಾರಾಯಣರ
ಪಾದದ ಮೇಲೆ ಬಿದ್ದು ಶಿಷ್ಯರಾದರು (೧೦೯)

ವಾಯುದೇವರ ಮೂರವತಾರ ಹೇಳಿ ಕೇಳಿದವರಿಗೆ
ಸಾಯುಜ್ಯ ಪದವಿ ಕೊಡುವ ಹಯವದನನು (೧೧೦)

ಸೋದೆ ಮಠದಲ್ಲಿ ಇದ್ದ ವಾದಿರಾಜ ಪಾಡಿದಂತೆ
ಹಯವದನನ ಪಾಡಿರಿ ವಿನೋದದಿಂದಲಿ (೧೧೧)

ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನಾ ಸುವ್ವಿ
ಸುವ್ವಿ ಮಧ್ವರಾಯರಿಗೆ ಸುವ್ವಾಲಿ ||

|| ಶ್ರೀ ಕೃಷ್ಣಾರ್ಪಣಮಸ್ತು ||


madhva suvvAli

suvvi hanumaMta suvvi
suvvi BImasEnA suvvi
suvvi madhvarAyarige suvvAli [pa]

hOgi suraru moreyiDalu dEva cittadalliyiTTu
vAyudEvarige appaNeya mADida (1)

j~jAna kali kAladalli SUnyavAgi hOgutiralu
SrIramaNana Aj~jeyiMda vAyu madhvarAdaru (2)

acyutana pAda dhyAna tamma hRudayadalli iTTu
tamma kIrti mUru lOkadalliyiTTaru (3)

asura hRudayadalli saMtApavannu iTTaru
sura munISvararalli suKavaniTTaru (4)

garuDagaMbada mEle obba maruLu puruSha
kuNidu kuNidu sarvaj~jaru janisuttAre eMdu hELida (5)

urviya mEle idda Suddha sAdhu janarige
buddi prakASavannu mADi koDuvaru (6)

BUmiya mEle idda Suddha sAdhu sajjanarige
j~jAna prakASavannu mADi koDuvaru (7)

madhyagEha BaTTaru tapassu mADuttiralu vAsudEva
uddaripa magana koTTa madhvarAyara (8)

nAlku tiMgaLAgiralu A SiSuvanetti koMDu
naDedu baMdaru anaMtaSayanake (9)

tAyiya kUDikoMDu dEvarige vaMdise
naDedu baMdaru anaMtaSayanake (10)

iMdirESana pAda nenedu AnaMda BaritarAdaru
vaMdaneya mADi kaiyya mugidu niMtaru (11)

magana harake oppisi manege baruva kAladalli
oDedu brahma SiSuvinA mahime hELitu (12)

kuladEvateya kaMDu tirugi baruva vELyadalli
oDedu brahma SiSuvinA mahime hELitu (13)

horage magana biTTu tAyi maneya kelasak~hOdalu
taDedaLeMdu bikki bikki aLutalidditu (14)

ettikoMDarolladu bikki bikki aLutiralu
kuccida huruLiyannu tinisuttiddaLu (15)

etti giTTa huruLiyannu cikkavage tinisuvare
siTTiniMda magaLannu jabarsi koMDaLu (16)

maraLutiralu kEliyoLage huruLi tinalu madhwaru
hariye magana rakShiseMdu bEDikoMDaru (17)

aruNa udayadalli eddu gULIya bAla hiDidu
araNyada oLage saMchAra mADidaru (18)

RuNavA pitana bEDidavage huNise bitta ADutiralu
eNisikoDalu mukti hEtu AyitAtage (19)

tavaru maneya oLage maduve saMbhrama Agutiralu
magana mElina haMbalava maretu biTTaLu (20)

eraDu varShavAgalu shishuvu todalu nuDiyuta
naDeu baMditu anaMtashayanake (21)

ellige payaNaveMdu ella janaru kELalu
namma svAmi darushanake baMdeveMdaru (22)

cikkavana kANade dikku dikku huDukutA
caccaradi baMdaru anaMtaSayanake (23)

bAlakana kANade kEri kEri huDukuta
bEgadiMda baMdaru anaMtaSayanake (24)

cikkavana ettikoMDu BAhOdannu kaMDaru
biTTa nidhiyenna kaige sikkiteMdaru (25)

bAlakana ettikoMDu bAhOdannu kaMDaru
hOda nidhi enna kaige sEriteMdaru (26)

madhya gEha BaTTaru magana kaMDu appikoMDu
uddharisO svAmiyeMdu bEDikoMDaru (27)

SivaBaTTana purANa SiSuvu kELi dUShisi
sakala janara manassig-haruSha mADikoTTaru (28)

bAlakara kUDikoMDu vanadoLage ADutiralu
kAladalli muMji Aytu kamala nayanage (29)

upaniShattu shAstra Odi vanadoLage irutiralu
kiviya Udi taleya bEne biDisida guruvige (30)

sAdhani dvAdaSi baralu nIrillade miDukutiralu
bEgadiMda sarOvara nirmANa mADidaru (31)

Alada vRukSha taMdu talekeLage mADi bitte
koneya koMbiniMda phala puShpavAyitu (32)

maNimaMtaneMbO daitya maige sutti barutiralu
eDada pAdadiMda avana orisi biTTaru (33)

bAlakara kUDikoMDu vimAna giriyalADutiralu
bArO vAsudEvaneMdu magana karedaLu (34)

tAyi karedaLeMdu vimAna giriya dhumukidaru
pAda Uri jagava pAvanava mADidaru (35)

yOga paTTa dharisida jaDegaLa mastakavu
bEgadiMda sanyAsi Aguve neMdaru (36)

varuSha nODu bAla nInu bayasabEDa sanyAsa
bahaLa tapassiniMda ninna paDedE neMdaLu (37)

hAlu annavannu uMDu bahaLa kaShTapaTTu paDede
bALa ninage sanyAsa bEDaveMdaLu (38)

henneraDu sAvira varuSha chennAgi tapa mADi
bAla ninage sanyAsa bEDaveMdaLu (39)

bikShadannavanne uMba apEkSheyuLLa magana paDede
rakShaNeya mADuvara kANeneMdaLu (40)

viShNu tIrthareMba magana koTTu tAya saMtaisi
appaNeya koMDu ASramakke baMdaru (41)

uTTa dhOtra vannu bicci kaupIna kaTTikoMDu
AnaMdatIrthareMba sanyAsi Adaru (42)

moola guruvu nODirO haLevalli oddavara
suramunISvararu kaMDu haruSha baTTaru (43)

pApi alla kOpi alla pApi bommanu alla
pApi mAyAvAdi matava muridu biTTaru (44)

j~jAna bOdha yeMbavana dUrakke ODisi SrI
mannArAyaNane paradEvate eMdu nuDidaru (45)

mAyAvAdigaLella vAda mADuvEvevenuta baralu
kANisI koLLad~hAMge ODi hOdaru (46)

kEraLa dEshakke hOgi madhvarAyaru
mAyAvAdigaLa kAlu seLedu biTTaru (47)

bhakta janara maneyoLage lekkavillada haNNu meddu
akShayavAgaleMdu avarige mOkSha koTTaru (48)

daMDa pottu shaMkarana kOlu muridu bisuDeMdu
bhaMgapaDisi muMde hiDidu nillisidaru (49)

gurugaLa manasina vyAkulaMgaLa kaLedu
geetA bhAShyavannu mADikoTTaru (50)

maraLi badarikASramakke teraLi madhvarAyaru
parvatava kaMDu AScarya paTTaru (51)

parvatada hirimeyannu varNisalaLavalla
garuDa SESha rudrarAriMdalAdarU (52)

Bakti-BAvadiMda madhvara baggi munigaLella nODi
muktidAtarigeragi stOtra mADutiddaru (53)

yOga paTTa dharisida jaDegaLa mastakavu
yOgigaLanu kaMDaru madhwarAyaru (54)

sarasijAkShana hoLeyuva hasta mastaka maiyya baNNa
charaNa kamala lOchanadavara kaMDaru (55)

iMdirESana pAda kaMDu AnaMda BaritarAgi
vaMdaneya stOtrava mADutiddaru (56)

iMdirESa SrImadAnaMdatIrtha rappikoMDu
ceMdadiMda EkAMta ADutiddaru (57)

I tIrthakke sariyilla I kShEtrakke samavilla
SAstra arthadiMda nirNayava mADidaru (58)

gurugaLAj~jeyiMda madhvaru teraLi Barata KaMDadali
nararige hariya stOtragaLanu mADidaru (59)

SOBanaBaTTaru SrImadAcAryara
pAdada mEle biddu SiShyarAdaru (60)

SOBana BaTTaru SrImadAcAryara
pAdatoLedu cAmarava hAkutiddaru (61)

BarataKaMDavanella carisi madhvarAyaru
uDupi eMba kShEtradalli vAsa mADidaru (62)

acyutaprEkShAcAryara citta nirmalagoLisi
viShNu sarvOttamaneMba j~jAna mADi koTTaru (63)

kaDala madhyadalli oMdu haDagu baMdu niMtiralu
kaMDu madhvarAyaru kaiya bIsidaru (64)

yOgadiMda daDake baralu SrImadAcAryarige
Enu bEkAddu bEDi koDuve eMdaru (65)

muttu mANikya Eke cinna beLLi namage Eke
bEDuvevu mUru gOpI caMdana eMdaru (66)

SrImadAcAryarige bahaLa saMtOShadiMda
mUru gopI caMdanada gaDDe koTTaru (67)

oMdoMdanu hegalaliTTu oMdugaDDe SiradaliTTu
ceMdadiMda dvAdaSa stOtra hELuta baMdaru (68)

AgaloMdu gaDDe oDeye rAmamUruti iralu
mattoMdu gaDDe biddu durge janisi hOdaLu (69)

vAridhiyoLage idda dvArakeya kRuShNana
dvAdaSa stOtra hELuta koMDu baMdaru (70)

rajatapITha puradoLage rAjamaMdirava mADi
ramyamUrti kRuShNana pratiShThisidaru (71)

kRuShNa vEdavyAsara mUrtiya pratiShThe mADi
trikAladalli pUje mADutiddaru (72)

aShTa varShada bAlakarige koTTu sanyAsavannu
SrIkRuShNana pUje sAMga mADisidaru (73)

kRuShNana pratime eraDu viThalana pratime mUru
varaha nRusiMha rAmana pratime koTTaru (74)

eMTu maThadavarige eMTu mUruti koTTu
saMtata pUje sAMga mADisidaru (75)

eraDu tiMgaLigoMdu paryAyavannu mADi
sarasijAkShana pUje sAMga mADisidaru (76)

urvi mEle uLLa Suddha tIrthaMgaLa taMdu
madhva sarOvarava nirmANa mADidaru (77)

uShaH kAladalli eddu SrIkRuShNana pUjisi
sAyaMkAladalli subrahmaNyakke baMdaru (78)

madhyAhna kAladalli mathyatALa maThake baMdu
madhvarAyara mahime mUru jagava tuMbitu (79)

kOTi sUryara beLaku kalaSagOpurada kAMti
vAsudEvana paTTaNadoLu SOBisutidduvu (80)

acyutana paTTaNadoLu citraBUsuraru ella
paripari krIDegaLa ADutiddaru (81)

ISvara BUmiya tODu hOgu eMdare
torisi koTTare nA toDuveneMdaru (82)

tOrisi koDuvenenuta nelake guddali hAke
tODi tODid-hAMge neTTanAgi hOdaru (83)

nAve illade nadiya hEge dATadiri eMdu
kAvalidda dUtarella kELutiddaru (84)

jagavanella rakShisuva svAmi namma rakShisuva
avarige takka mAtanADi muMde naDedaru (85)

kAviya valliyannu gaMTu kaTTi bisuDalu
tamma tammoLe kaDidADi maDidarellaru (86)

kaLLarella aTTi baralu kallAgi niMtaru
kallu eMdu kaLLarella biTTu hOdaru (87)

kattaloLage nadiya dATi vastra tOyad-hAMge baralu
mecci doreyu dUtara kaLuhi koTTanu (88)

muvattu koDada hAlu mUru sAvira haNNu meddu
Atmadalli jIrNavAytu anilatanayage (89)

SrImadAcAryara vyAKyAna kAladalli
AdiSESha tAnu baMdu kELutiddanu (90)

mAyAvAdi tArakana sUra BEdisalAranu
madhvarAyareMba agni jayisi biTTitu (91)

jAlagAra mInavannu yAva pariyaleLevanu
madhvarAyaru hAge mudrAMkana mADidaru (92)

SrImadAcAryara dvAdaSa nAma oNagalu
bEga SiShya tuLasi vanamAle hAkida (93)

rAjasiMharAyanu SrImadAcAryara
pAdada mEle biddu SiShyanAdanu (94)

trivikrama paMDitaru SrImadAcAryara
pAdada mEle biddu SiShyarAdaru (95)

SOBana BaTTaru SrImadAcAryarige
rAja saBeyoLage pustaka koDisidaru (96)

rAjasiMha rAyanu SrImadAcAryarige
rAja saBeyoLage pustaka koTTanu (97)

SrImadAcAryaru snAnakke hOgalu
bEga SiShyarella sEve mADutiddaru (98)

SrImadAcAryaru snAnakke hOgalu
bEga gaMge baMdu nelesi pavitraLAdaLu (99)

dvAdaSAdityaru EkakAlakudisidaMte
SrImadAcAryara dvAdaSanAma hoLedavu (100)

aMdu A dESadalli anAvRuShTi Agiralu
daMDa kOlu tirugisi tIrtha mADidaru (101)

sutta mutta BUmiyannu otti kAluve tegesi
batta beLesuttiddarI vicitra mahimaru (102)

vyAKyAna kAladalli dIpa SAMtavAgutiralu
jyOtirmaya mADidaru aMguShThadiMdale (103)

gaMDavATa eMbuvanu gaLana hiDidu otti otti
tuMDu muMDAgi BUmi mEle biddanu (104)

aNu mahattugaLella nimiShadoLage mADikoTTu
huDugana hegalEri dEvAlayake baMdaru (105)

pUruva eMbuvanu SrImadAcAryara
mUgina mEle biddu patanavAdanu (106)

kokkaDadoLage uLLa muppina brAhmaNage
kRuShNAmRuta mahArNava hELi koTTaru (107)

SrImadAcAryariddu aShTami paryaMta
eraDu muhUrtadoLe badarikASramake baMdaru (108)

badarikASramake baMdu badari nArAyaNara
pAdada mEle biddu SiShyarAdaru (109)

vAyudEvara mUravatAra hELi kELidavarige
sAyujya padavi koDuva hayavadananu (110)

sOde maThadalli idda vAdirAja pADidaMte
hayavadanana pADiri vinOdadiMdali (111)

suvvi hanumaMta suvvi
suvvi BImasEnA suvvi
suvvi madhvarAyarige suvvAli ||

|| SrI kRuShNArpaNamastu ||

Leave a Reply

Your email address will not be published. Required fields are marked *

You might also like

error: Content is protected !!